ಪುಂಜಾಲಕಟ್ಟೆ:ಇಲ್ಲಿನ ಶ್ರೀ ರಾಮ ನಗರ ಪ್ರಗತಿ ಹಾರ್ಡ್‌ವೇರ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.ಘಟನೆಯಲ್ಲಿ ಪಿಕಪ್ ಚಾಲಕ ಮದ್ದಡ್ಕದ ರಾಘವೇಂದ್ರ ಅವರು ಗಾಯಗೊಂಡಿದ್ದು, ಬಂಟ್ವಾಳದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಜಿರೆಯಿಂದ ಗ್ಯಾಸ್ ಸಿಲಿಂಡರ್ ಹೇರಿಕೊಂಡು ಬರುತ್ತಿದ್ದ ಲಾರಿ ಹಾಗೂ ಪುಂಜಾಲಕಟ್ಟೆ ಕಡೆಗೆ ಹೋಗುತ್ತಿದ್ದ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದೆ.ಈ ರಸ್ತೆಯಲ್ಲಿ ಇದೇ ಜಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರ್ 17ರಂದು ಇದೇ ಜಾಗದಲ್ಲಿ ಪಿಕಪ್ ಮತ್ತು ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.
©2021 Tulunada Surya | Developed by CuriousLabs