ವಿಟ್ಲ: ಕನ್ಯಾನ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಂಠೇಗೌಡ ಇಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಕನ್ಯಾನ ಪ್ರಥಮ ದರ್ಜೆ ಶಾಲೆಗೆ 1996 ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೃತ್ತಿ ನೆಲೆಯಲ್ಲಿ ಆರಂಭಿಸಿ ಸುದೀರ್ಘ 26 ವರ್ಷಗಳ ಕಾಲ ಒಂದೇ ಕಾಲೇಜಿನಲ್ಲಿ ಸರ್ಕಾರಿ ಸೇವೆಯನ್ನು ಸಲ್ಲಿಸಿದ್ದು ಇಂದು ಶಿಕ್ಷಕ ವೃಂದಕ್ಕೆ ವಿದಾಯ ಹೇಳಲಿದ್ದಾರೆ.

ಈ ಹಿನ್ನಲೆ ಕನ್ಯಾನ ವಲಯ ಕಾಂಗ್ರೆಸ್ ,ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು ಕನ್ಯಾನ ವತಿಯಿಂದ ಸೇವಾ ನಿವೃತ್ತಿ ಹೊಂದಿದ ಶ್ರೀಕಂಠೇಗೌಡರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಪಿ.ಅಬ್ದುಲ್ ರಹಿಮಾನ್,ಪಂ.ಸದಸ್ಯರುಗಳಾದ ಮೊಯಿದಿನ್ ಕುಂಞ,ಕೃಪ್ಣ ನಾಯ್ಕ,ನೆಫಿಸತುಲ್ ಬುಶ್ರಾ,ಗಂಗಾಧರ ಕನ್ಯಾನ, ಪೌಢ ಶಾಲಾ ಶಿಕ್ಷಕ ವೃಂದ ಹಾಗೂ ಪ್ರಥಮ ದರ್ಜೆ ಕಾಲೇಜು ಶಿಕ್ಷಕ ವೃಂದ ಉಪಸ್ಥಿತರಿದ್ದರು.
