ಉಡುಪಿ: ನಾಳೆ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿಂದು ಸರ್ವ ಧರ್ಮೀಯರ ಶಾಂತಿ ಸಭೆ ನಡೆಯಿತು.ಉಡುಪಿಯಲ್ಲಿ ಹಿಜಾಬ್ ಕೇಸರಿ ಕಚ್ಚಾಟ ಹಿನ್ನೆಲೆಯಲ್ಲಿ ಈ ಸಭೆಯು ಮಹತ್ವ ಪಡೆದುಕೊಂಡಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಮಹತ್ವದ ಶಾಂತಿ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಹಿತ ಮುಖಂಡರು ಭಾಗಿಯಾದರು.
ಹಿಂದೂ ಜಾಗರಣ ವೇದಿಕೆ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಎಸ್ಡಿಪಿಐ, ಸಹಬಾಳ್ವೆ, ಕ್ರೈಸ್ತ ಧರ್ಮಗುರುಗಳು, ಕಾಂಗ್ರೆಸ್ ಮುಖಂಡರು, ಎಬಿವಿಪಿ ಸಂಘಟನೆಗಳು ಭಾಗಿಯಾಗಿದ್ದವು. ಜಿಲ್ಲಾ ಪೊಲೀಸ್ ವರಿಷ್ಟಾಧಿಜಾರಿಗಳು ಸಹಿತ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ಪರಸ್ಪರ ಕೋಮು ಸಾಮರಸ್ಯ ,ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.