Wednesday, April 24, 2024
spot_img
More

    Latest Posts

    ಸಿಲಿಕಾನ್‌ ಸಿಟಿಯಲ್ಲಿ ನಕಲಿ ದಾಖಲೆ ಪಡೆದು ಪಾಸ್​ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್‌ ಅರೆಸ್ಟ್‌

    ಬೆಂಗಳೂರು: ನಕಲಿ ದಾಖಲೆ ಪಡೆದು ಪಾಸ್​ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್‌ ಅರೆಸ್ಟ್‌ ಆಗಿದ್ದಾರೆ.

    ಬೆಂಗಳೂರಿನ ಬಸವನಗುಡಿ ಪೊಲೀಸರಿಂದ 9 ಆರೋಪಿಗಳ ಬಂಧನವಾಗಿದೆ. ನಕಲಿ ಅಂಕಪಟ್ಟಿ, ಟಿಸಿ, ಛಾಪಾ ಕಾಗದ, ಆಧಾರ್ ಕಾರ್ಡ್ ಬಳಸಿ ಆರೋಪಿಗಳು ಗ್ರಾಹಕರಿಂದ 1 ಪಾಸ್​​ಪೋರ್ಟ್​ಗೆ 45 ಸಾವಿರ ರೂ. ಪಡೆಯುತ್ತಿದ್ದರು. ಇತ್ತೀಚೆಗೆ ಒಬ್ಬ ಕಳ್ಳ ಪಾಸ್​ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಹಾರಿದ್ದ ನಿದರ್ಶನವೂ ಇದೆ. ಶಿವಮೊಗ್ಗದ ಓರ್ವ ಕೊಲೆ ಆರೋಪಿ ದುಬೈಗೆ ಹೋಗಿರುವ ಮಾಹಿತಿ ಇದೆ. ಕೊಲೆ ಪ್ರಕರಣದ ತನಿಖೆ ವೇಳೆ ಈ ನಕಲಿ ಪಾಸ್​​ಪೋರ್ಟ್ ಜಾಲ ಬೆಳಕಿಗೆ ಬಂದಿದೆ.

    ತಾವೇ ಮಾರ್ಕ್ಸ್ ಕಾರ್ಡ್, ಟಿಸಿ ಸಿದ್ಧಪಡಿಸುತ್ತಿದ್ದ ಆರೋಪಿಗಳು ಆಧಾರ್ ಕಾರ್ಡ್​ನಲ್ಲಿ ಫೋಟೋ ಎಡಿಟ್ ಮಾಡಿ ಕಾರ್ಡ್ ನಕಲು ಮಾಡುತ್ತಿದ್ದರು. ಇದರಿಂದ ಆರೋಪಿಗಳು ಭಾರತ, ಶ್ರೀಲಂಕಾದ ಪಾಸ್​ಪೋರ್ಟ್ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ನಕಲಿ ಟಿಸಿ, ನಕಲಿ ಆಧಾರ್ ಕಾರ್ಡ್, ನಕಲಿ ಮಾರ್ಕ್ಸ್ ಕಾರ್ಡ್, ಅಸಲಿ ಪಾಸ್​​ಪೋರ್ಟ್​​ಗಳನ್ನು ಬಸವನಗುಡಿ ಪೊಲೀಸರುವಶಕ್ಕೆ ಪಡೆದಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss