ಇಂದಿನ ಕಳಪೆ ಜೀವನ ಶೈಲಿಯಲ್ಲಿ ಆರೋಗ್ಯವನ್ನು ಕಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ದೇಹದ ರಕ್ಷಣೆಗಾಗಿ ಎಲ್ಲಾ ತರಕಾರಿಗಳು, ಹಣ್ಣುಗಳನ್ನು ತಿನ್ನಬೇಕು. ಅದರಲ್ಲಿ ಪಪ್ಪಾಯ ಸೇವನೆ ದೇಹಕ್ಕೆ ಉತ್ತಮ. ಅದರಲ್ಲಿರುವ ಬೀಜಗಳಿಂದಲೂ ಸಾಕಷ್ಟು ಪ್ರಯೋಜನಗಳಿವೆ.
ಪಪ್ಪಾಯಿ ಬೀಜಗಳ ಪ್ರಯೋಜನಗಳು
ಪಪ್ಪಾಯಿ ಬೀಜಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ನೇರವಾಗಿ ತಿಂದರೆ ಕಹಿ, ಆದರೆ ಸಾಮಾನ್ಯವಾಗಿ ಈ ಬೀಜಗಳನ್ನು ಮೊದಲು ಬಿಸಿಲಿನಲ್ಲಿ ಒಣಗಿಸಿ, ನಂತರ ಪುಡಿಮಾಡಿ ಸೇವಿಸಬಹುದು.
ಹೃದಯದ ಆರೋಗ್ಯ ಉತ್ತಮ
ನಮ್ಮ ದೇಶದಲ್ಲಿ ಹೃದ್ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಪ್ಪಾಯಿ ಬೀಜಗಳು ಸಂಜೀವನಿ ಮೂಲಿಕೆಗಿಂತ ಕಡಿಮೆಯಿಲ್ಲ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಬೀಜಗಳ ಸಹಾಯದಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಊತ ನಿಯಂತ್ರಣ
ಉರಿಯೂತವನ್ನು ಕಡಿಮೆ ಮಾಡಲು ಪಪ್ಪಾಯಿ ಬೀಜಗಳು ಬಹಳ ಪರಿಣಾಮಕಾರಿ. ಈ ಬೀಜಗಳಲ್ಲಿ ಆಲ್ಕಲಾಯ್ಡ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ಇರುವ ಊತ ಮಾಯವಾಗುತ್ತದೆ.
ಚರ್ಮಕ್ಕೆ ಸಹಾಯಕ
ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪಪ್ಪಾಯಿ ಬೀಜಗಳು ಪ್ರಯೋಜನಕಾರಿಯಾಗಿವೆ. ಇದರಲ್ಲಿರುವ ಆಂಟಿಯೇಜ್ ಗುಣಲಕ್ಷಣಗಳು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
