ಮಂಗಳೂರು: ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಡೋಟಿ ಕ್ರಿಸ್ಟಬೆಲ್ ಅವರ ಮೊಮ್ಮಗಳು ಶ್ಯಾರಿಲ್ ಟ್ರಿನಿಟಾ ಮಾರ್ಕ್ (19) ನ. 29ರಿಂದ ನಾಪತ್ತೆಯಾಗಿದ್ದಾರೆ.
ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿದ್ದು, ನೆರೆಕರೆಯವರನ್ನು ಹಾಗೂ ಸಂಬಂಧಿಕರನ್ನು, ಸ್ನೇಹಿತರನ್ನೂ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ.
ನಾಪತ್ತೆಯಾಗಿರುವ ಯುವತಿ 5 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದು, ತುಳು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.