ಪಡುಬಿದ್ರಿ : ಇಲ್ಲಿನ ಬ್ರಹ್ಮಸ್ಥಾನ ರಸ್ತೆ ಬಳಿಯ ನಿವಾಸಿ ಸೌಜನ್ಯಾ (22) ಎಂಬವರು ನಿನ್ನೆ ಮನೆಯ ಸೀಲಿಂಗ್ ನ ಕಬ್ಬಿಣದ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೌಜನ್ಯಾ, ಹೈದರಾಬಾದ್ ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು, ಕೊರೊನಾ ಕಾರಣದಿಂದ ಕಳೆದ 10 ತಿಂಗಳುಗಳಿಂದ ವರ್ಕ್ ಫ್ರಂ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದರು.
ಇನ್ನು ಫೆ.10 ರಂದು ಗುರುವಾರ ತಂದೆ-ತಾಯಿ ಸುರತ್ಕಲ್ ಗೆ ಹೋಗಿದ್ದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.