ಕೋಟ: ನಿನ್ನೆ ಬೀಸಿದ ಭಾರೀ ಗಾಳಿಗೆ ಟ್ರಾಲ್ ಬೋಟೊಂದು ಮಗುಚಿ ಬಿದ್ದು, ಮೂವರು ಮೀನುಗಾರರು ಅಪಾಯದಿಂದಪಾರಾಗಿದ್ದಾರೆ.ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಈ ಮೂವರನ್ನು ರಕ್ಷಿಸಿದ್ದಾರೆ.
ಮಲ್ಪೆಯಿಂದ ಬೆಳಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ಬೋಟ್ , 9.30ರ ಸಂದರ್ಭ ಮಣೂರು ಪಡುಕೆರೆ ಸಮೀಪ ಮಗುಚಿದ್ದು, ಮಣೂರು ಪಡುಕರೆಯ ನಿವಾಸಿಗಳಾದ ರಾಘವೇಂದ್ರ, ಸುರೇಂದ್ರ, ನಾರಾಯಣ ಅಪಾಯದಿಂದ ಪಾರಾಗಿದ್ದಾರೆ.
ನಾರಾಯಣ ಅವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು,ಇನ್ನಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಭೇಟಿ ನೀಡಿದ್ದಾರೆ.