Friday, April 19, 2024
spot_img
More

    Latest Posts

    ಮಂಗಳೂರು: ಬಸ್ ಡ್ರೈವರ್‌ನ ಓವರ್‌ಟೇಕ್ – ಬಾಲಕ ಬಲಿ

    ಮಂಗಳೂರು: ಅತೀ ವೇಗದಿಂದ ಬಂದ ಬಸ್ಸೊಂದು ದ್ವಿಚಕ್ರ ವಾಹನ ಸವಾರರಿಗೆ ಬಡಿದು 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಲಾಲ್‌ಭಾಗ್‌ ಬಳಿ ನಡೆದಿದೆ.

    ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ.ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಸಹಸವಾರ 12ರ ಹರೆಯದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಶವದ ತೆರವು ಕಾರ್ಯಾಚರಣೆ ನಡೆಸಿ, ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss