ಬೆಂಗಳೂರು ಗ್ರಾಮಾಂತರ: ಚಿಂತಾಮಣಿ ಯಿಂದ ಬಂದಂತಹ ಕುಟುಂಬವೊಂದು ಬೆಳ್ಳಂ ಬೆಳಗ್ಗೆಯೇ ಓವರ್ ಟ್ಯಾಂಕ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರೀನ್ ವೇ ಲೇ ಔಟ್ ನಲ್ಲಿ ನಡೆದಿದೆ.
ನಿವೃತ್ತಿ ಡಿವೈಎಸ್ಪಿ ಕೋನಪ್ಪ ರೆಡ್ಡಿಗೆ ದೊಡ್ಡಬಳ್ಳಾಪುರದ ಗ್ರೀನ್ ವೇ ಲೇ ಔಟ್ ಮಾಡಲು 38 ಲಕ್ಷ ಹಣ ನೀಡಿದ್ದೆ. ಆದರೆ ಕೊಟ್ಟ ಹಣವನ್ನು ಕೇಳಿದರೆ ಕೋನಪ್ಪ ರಡ್ಡಿ ಹಾಗೂ ಅವನ ಮಗ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಚಿಂತಾಮಣಿಯಿಂದ ಬಂದಂತಹ ಒಂದೇ ಕುಟುಂಬದ ಎಂಟು ಮಂದಿ ಪೆಟ್ರೋಲ್ ಕ್ಯಾನ್ ಹಿಡಿದು ಗ್ರೀನ್ ವೇ ಲೇ ಔಟ್ ನ ಓವರ್ ಟ್ಯಾಂಕ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ಇನ್ನೂ ಸ್ಥಳಕ್ಕೆ ಕೋನಪ್ಪ ರಡ್ಡಿ ಬರುವ ತನಕ ನಾವೂ ಇಲ್ಲಿಂದ ಇಳಿಯುವುದಿಲ್ಲ ಎಂದು ಕುಟುಂಬದಸ್ಥರು ಓವರ್ ಟ್ಯಾಂಕ್ ತುದಿಯಲ್ಲಿನ ಮೆಟ್ಟಿಲಿನ ಮೇಲೆ ನಿಂತಿದ್ದಾರೆ. ಈ ವಿಷಯ ತಿಳಿದು ಸ್ಥಳ ಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಕುಟುಂಬದಸ್ಥರನ್ನು ಮನ ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ.
ಆದ್ರೇ.. ಪೊಲೀಸರ ಮನವೊಲಿಕೆಗೆ ಬಗ್ಗದಂತ ಕುಟುಂಬಸ್ಥರು, ಸ್ಥಳದಲ್ಲಿಯೇ ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಿ, ಕೊಟ್ಟ ಹಣವನ್ನು ವಾಪಾಸ್ ಕೊಡೋದಾದ್ರೇ ಮಾತ್ರ ಟ್ಯಾಂಕ್ ಮೇಲಿನಿಂದ ಕೆಳಗೆ ಇಳಿಯೋದಾಗಿ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಆತ್ಮಹತ್ಯೆಗೆ ಯತ್ನಿಸೋದಕ್ಕಾಗಿ ಓವರ್ ಟ್ಯಾಂಕ್ ಏರಿರುವಂತ ಇಡೀ ಕುಟುಂಬವನ್ನು ಸುರಕ್ಷಿತಿವಾಗಿ ಕೆಳಗೆ ಇಳಿಸೋದಕ್ಕಾಗಿ ಹರಸಾಹಸ ಪಡುವಂತೆ ಆಗಿದೆ.

