Sunday, September 15, 2024
spot_img
More

    Latest Posts

    ವಿಟ್ಲ: ಬಸ್ ತಂಗುದಾಣದಲ್ಲಿ ರಕ್ತ ಮತ್ತು ಅಂಗಾಂಗ ತುಣುಕುಗಳು ಪತ್ತೆ

    ವಿಟ್ಲ: ಸಾರ್ವಜನಿಕ ಬಸ್ ತಂಗುದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾದ ಘಟನೆ ಜೂ.29 ರಂದು ವಿಟ್ಲ ಸಮೀಪದ ಬದನಾಜೆ ಎಂಬಲ್ಲಿ ನಡೆದಿದೆ. ಬದನಾಜೆ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಹತ್ಯೆ ಮಾಡಲಾಗಿತ್ತೇ? ಅಥವಾ ಅಪಘಾತದಿಂದ ಗಾಯಗೊಂಡವರು ಯಾರದರೂ ಬಸ್ ನಿಲ್ದಾಣದಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರಕರಣದ ಸತ್ಯಾಂಶ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss