Tuesday, March 19, 2024
spot_img
More

    Latest Posts

    ನವದೆಹಲಿ: ಅಂಗಾಂಗ ದಾನ ಶ್ರೇಷ್ಠ ಕಾರ್ಯ- ಪ್ರಧಾನಿ ಮೋದಿ

    ನವದೆಹಲಿ: ಅಂಗಾಂಗ ದಾನದಂಥ ಮಾನವೀಯ ಕೆಲಸ ಮಾಡಬೇಕು ಎಂದು ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಲ್ಲದೇ ‘ಈ ನಿಟ್ಟಿನಲ್ಲಿ ನಮ್ಮ ಏಕರೂಪ ನೀತಿಯನ್ನು ರೂಪಿಸುತ್ತಿದ್ದು, ಅಂಗಾಂಗ ದಾನ ಪ್ರಕ್ರಿಯೆ ಇದರಿಂದ ಸರಳವಾಗಲಿದೆ’ ಎಂದಿದ್ದಾರೆ. ಭಾನುವಾರ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದ 99ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ‘ಮರಣಾನಂತರ ಅಂಗಾಂಗ ದಾನ ಮಾಡುವವರು ಅದನ್ನು ಸ್ವೀಕರಿಸುವವರಿಗೆ ‘ದೇವರ ಸಮಾನ’ ಆಗಿರುತ್ತಾರೆ. ಇತ್ತೀಚೆಗೆ ದೇಶದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿದ್ದು ತೃಪ್ತಿದಾಯಕವಾಗಿದೆ’ ಎಂದರು. ಅಲ್ಲದೇ ತಮ್ಮ ಮೃತ ಕುಟುಂಬ ಸದಸ್ಯರ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡ ಕುಟುಂಬಸ್ಥರ ನಿರ್ಧಾರವನ್ನು ಮೋದಿ ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ರೇಡಿಯೋ ಕಾರ‍್ಯಕ್ರಮ 100ನೇ ಸಂಚಿಕೆ ಪೂರೈಸಲಿದೆ. ಈ ಬಗ್ಗೆ ತಮ್ಮ 99ನೇ ‘ಮನ್‌ ಕೀ ಬಾತ್‌’ನಲ್ಲಿ ಮಾತನಾಡಿದ ಮೋದಿ, ‘100ನೇ ಸಂಚಿಕೆ ಮುಂದಿನ ತಿಂಗಳು (ಏಪ್ರಿಲ್‌ 30ಕ್ಕೆ) ಪ್ರಸಾರ ಆಗಲಿದೆ. ನಾನು ಅಂದು ಪ್ರಸ್ತಾಪಿಸಬಹುದಾದ ವಿಷಯಗಳ ಕುರಿತು ಸಲಹೆ ನೀಡಿ’ ಎಂದು ಜನರಲ್ಲಿ ಮನವಿ ಮಾಡಿದರು. ಕೆಲವೆಡೆ ಕೊರೋನಾ ಹೆಚ್ಚಾಗುತ್ತಿದ್ದು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ದೇಶದ ಸೋಲಾರ್‌ ಶಕ್ತಿ ಅಭಿವೃದ್ಧಿಯನ್ನು ಪ್ರಶಂಸಿಸಿದ ಅವರು ದೇಶದಲ್ಲಿ ‘ಮಹಿಳಾ ಶಕ್ತಿ’ ದೊಡ್ಡ ಪಾತ್ರ ವಹಿಸುತ್ತಿದೆ ಎಂದರು. ಈ ವೇಳೆ ಆಸ್ಕರ್‌ ವಿಜೇತ ಭಾರತೀಯ ಚಿತ್ರಗಳ ಬಗ್ಗೆಯೂ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss