Saturday, April 20, 2024
spot_img
More

    Latest Posts

    ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತ ಅವಧಿ ಜುಲೈ ತಿಂಗಳಲ್ಲಿ ಸಂಪೂರ್ಣ – ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಗೆ ಚುನಾವಣಾ ಆಯೋಗ ಆದೇಶ

    ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತ ಅವಧಿ  ಜುಲೈ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ  ಆಯ್ಕೆಗೆ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಿದೆ.

    ರಾಜ್ಯದಲ್ಲಿ 5948 ಗ್ರಾಪಂಗಳಿಗೆ ತಾಲೂಕುವಾರು, ವರ್ಗವಾರು ಚುನಾವಣೆ 2020 ರಲ್ಲಿ ನಡೆದಿತ್ತು. ಅದಾದ ಬಳಿಕ ಎರಡನೇ ಅವಧಿಗೆ  ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಾಗಿದೆ. ಪರಿಶಿಷ್ಟ ಪಂಗಡ, ಜಾತಿ, ಹಿಂದುಳಿದ ವರ್ಗ ಹೀಗೆ ಎಲ್ಲಾ ವರ್ಗಗಳಿಗೂ ಮೀಸಲಾತಿ ನಗದಿಪಡಿಸುವ ಸಂಬಂಧ ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ.

    ರಾಜ್ಯದಲ್ಲಿ ಮುಂದೆ ಹೊಸದಾಗಿ ಯಾವುದೇ ಗ್ರಾಪಂ ರಚಿತಗೊಂಡರೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದು ನಿರ್ಧರಿಸುವಂತೆ ಸೂಚಿಸಲಾಗಿದೆ. ಜೂನ್ ಅಂತ್ಯ ಅಥವಾ ಜುಲೈ ತಿಂಗಳಲ್ಲಿ ಮೀಸಲಾತಿ ನಿಗದಿ ಮಾಡುವ ಸಾಧ್ಯತೆ ಇದ್ದು, ಕುತೂಹಲಕ್ಕೆ ಕಾರಣವಾಗಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss