Tuesday, July 16, 2024
spot_img
More

  Latest Posts

  ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಆರಂಭ

  ಹೊಸದಿಲ್ಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ‘ಆಪರೇಷನ್ ಅಜಯ್’ ಆರಂಭಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಯುದ್ಧಪೀಡಿತ ದೇಶದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಕಟಿಸಿದ್ದಾರೆ. ಇದಕ್ಕಾಗಿ ವಿಶೇಷ ಚಾರ್ಟರ್ ವಿಮಾನಗಳು ಹಾಗೂ ಇತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯ ದೇಶದಲ್ಲಿ ಇಸ್ರೇಲ್ ಹಾಗೂ ಹಮಾಸ್ ಉಗ್ರರ ಕದನ ಮುಂದುವರಿದಿದೆ. ಹಮಾಸ್ ಪರ ಸಿರಿಯಾ, ಇರಾನ್, ಲೆಬನಾನ್‌ನಂತಹ ದೇಶಗಳು ದಾಳಿಗೆ ಮುಂದಾಗಿದ್ದರೆ, ಅಮೆರಿಕ, ಬ್ರಿಟನ್, ಫ್ರಾನ್ಸ್ ಹಾಗೂ ಇತರೆ ದೇಶಗಳು ಇಸ್ರೇಲ್ ಬೆನ್ನಿಗೆ ನಿಂತಿವೆ. ಭಾರತಕ್ಕೆ ಮರಳಲು ಬಯಸಿರುವ ನಮ್ಮ ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಆಪರೇಷನ್ ಅಜಯ್ ಆರಂಭಿಸಲಾಗಿದೆ. ವಿಶೇಷ ಚಾರ್ಟರ್ ಫ್ಲೈಟ್‌ಗಳು ಮತ್ತು ಇತರೆ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ” ಎಂದು ಜೈಶಂಕರ್ ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ವಿದೇಶದಲ್ಲಿ ನಮ್ಮ ಜನರ ಸುರಕ್ಷತೆ ಹಾಗೂ ಯೋಗ- ಕ್ಷೇಮಕ್ಕಾಗಿ ಸಂಪೂರ್ಣ ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss