Friday, March 29, 2024
spot_img
More

    Latest Posts

    ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ- ನಿಜವಾಯ್ತಾ ಕೋಡಿಮಠ ಶ್ರೀ ಹೇಳಿದ ಚುನಾವಣಾ ಭವಿಷ್ಯ.!

    ಬೆಂಗಳೂರು : ಎರಡು ತಿಂಗಳ ಹಿಂದೆ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೀಡಿದ್ದ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

    “ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಸಮ್ಮಿಶ್ರ ಸರ್ಕಾರ ಅಧಿಕಾರ‌ ಮಾಡಲ್ಲ ಎಂದು ಜನವರಿಯಲ್ಲಿ ಶ್ರೀಗಳು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಜತೆಗೆ, ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ” ಎಂದೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಭವಿಷ್ಯ ನುಡಿದಿದ್ದರು.ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆ ತನಕ ಪಕ್ಷಾಂತರಗಳು ಇರುತ್ತವೆ. ಪಕ್ಷಗಳು ಕೂಡಿ ಹೋಗುವುದು ಕಷ್ಟ. ಚುನಾವಣೆವರೆಗೂ ಏನು ಹೇಳೋದಕ್ಕೆ ಆಗೋಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ‌‌. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಫೆಬ್ರುವರಿಯಲ್ಲಿ ಕೋಡಿಮಠ ಶ್ರೀ ಹೇಳಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss