Friday, March 29, 2024
spot_img
More

    Latest Posts

    ಪ್ಯಾಂಟ್‌ ಜೇಬಿನಲ್ಲಿ ಸ್ಫೋಟಗೊಂಡ OnePlus Nord 2..!

    ಸ್ಮಾರ್ಟ್‌ಫೋನ್ ಈಗ ಬಹುತೇಕ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ, ಸ್ಮಾರ್ಟ್‌ಫೋನ್‌ ಸ್ಫೋಟ ಎಂಬುದನ್ನು ಆಗಾಗ್ಗೆ ಕೇಳುತ್ತಿರುತ್ತೀವಿ. ಇದೇ ರೀತಿ ಇತ್ತೀಚೆಗೆ ತಮ್ಮ OnePlus Nord 2 ಸ್ಫೋಟಗೊಂಡಿದೆ ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಕಂಪನಿಯು ಅಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಹೆಚ್ಚಿನ ತನಿಖೆಗಾಗಿ ವಿವರಗಳನ್ನು ಸಂಗ್ರಹಿಸಲು ಬಳಕೆದಾರರನ್ನು ಈಗಾಗಲೇ ಸಂಪರ್ಕಿಸಿದೆ ಎಂದು ಮಂಗಳವಾರ, ನವೆಂಬರ್ 9 ರಂದು ಹೇಳಿದೆ.

    “ನಾವು ಅಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ತಂಡವು ಈಗಾಗಲೇ ಬಳಕೆದಾರರನ್ನು ತಲುಪಿದೆ ಮತ್ತು ಇದನ್ನು ಮತ್ತಷ್ಟು ತನಿಖೆ ಮಾಡಲು ನಾವು ವಿವರಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು OnePlus ಕಂಪನಿ ಸುದ್ದಿ ಸಂಸ್ಥೆ IANSಗೆ ತಿಳಿಸಿದೆ.

    ಮಹಾರಾಷ್ಟ್ರದ ಧುಲೆ ಮೂಲದ ಸುಹಿತ್ ಶರ್ಮಾ ಎಂಬ ಬಳಕೆದಾರರು ಈ ಘಟನೆಯನ್ನು ಟ್ವಿಟ್ಟರ್‌ನಲ್ಲಿ (Twitter) ಹಂಚಿಕೊಂಡಿದ್ದಾರೆ. “ನಿಮ್ಮಿಂದ ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ #OnePlusNord2Blast ನಿಮ್ಮ ಉತ್ಪನ್ನ ಏನು ಮಾಡಿದೆ ಎಂಬುದನ್ನು ನೋಡಿ. ದಯವಿಟ್ಟು ಪರಿಣಾಮಗಳಿಗೆ ಸಿದ್ಧರಾಗಿರಿ. ಜನರ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ. ನಿಮ್ಮಿಂದಾಗಿ ಆ ಹುಡುಗ ನರಳುತ್ತಿದ್ದಾನೆ. ಆದಷ್ಟು ಬೇಗ ಸಂಪರ್ಕಿಸಿ” ಎಂದು ಟ್ವೀಟ್ ಮಾಡಿದ್ದರು. ಬಳಕೆದಾರರು ಆ OnePlus ಸಾಧನದ ಜೊತೆಗೆ ಗಾಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ, ಬಲಭಾಗದಲ್ಲಿ ಸುಟ್ಟುಹೋಗಿರುವ ಹಾನಿಗೊಳಗಾದ ಸಾಧನವನ್ನು ಒಬ್ಬರು ನೋಡಬಹುದು. ಫೋನ್ ಅನ್ನು ಬಳಕೆದಾರರ ಪ್ಯಾಂಟ್‌ನ ಪಾಕೆಟ್‌ನಲ್ಲಿ ಇರಿಸಲಾಗಿದೆ ಎಂದು ಚಿತ್ರಗಳು ಸೂಚಿಸುತ್ತವೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss