ಮಂಗಳೂರು: ನಗರ ಹೊರವಲಯದ ತಲಪಾಡಿಯಲ್ಲಿ ಸಿಟಿ ಬಸ್ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸಂಚಾರ ರದ್ದುಗೊಳಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಚಾಲಕನನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಆಲ್ಬಟ್೯ ಲಸ್ರಾದೋ ನೇತೃತ್ವದಲ್ಲಿ ಇಂದು ಬೆಳಗ್ಗೆ ತಲಪಾಡಿ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಓವರ್ ಸ್ಪೀಡ್‌ನಲ್ಲಿ ತೆರಳುತ್ತಿದೆ ಎಂದು ಖಾಸಗಿ ಬಸ್‌ನ ಫೋಟೋ ತೆಗೆದು ದಂಡ ಹಾಕಲು ಮುಂದಾದಾಗ ಬಸ್ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ತಕ್ಷಣವೇ ಉಳಿದ ಸಿಟಿ ಬಸ್ ಸಿಬ್ಬಂದಿ ಸಂಚಾರ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸರು ಓರ್ವ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕೆಲ ತಿಂಗಳ ಹಿಂದೆ ತೊಕ್ಕೊಟ್ಟು ಫ್ಲೈಓವರ್ ಬಳಿ ಸ್ವಾಮಿ ಕೊರಗಜ್ಜ ಸ್ಟಿಕ್ಕರ್ ಇದ್ದ ಕಾರಿಗೆ ದಂಡ ವಿಧಿಸಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಇದೇ ಪೊಲೀಸ್ ಅಧಿಕಾರಿ ಗುರಿಯಾಗಿದ್ದರು.