ಮುಂಡಿತ್ತಡ್ಕ:- ವಿಷ್ಣು ಕಲಾವೃಂದ(ರಿ) ವಿಷ್ಣು ನಗರ ಮುಂಡಿತ್ತಡ್ಕ ಇದರ ನೇತೃತ್ವದಲ್ಲಿ ವಿಷ್ಣು ನಗರ ಕ್ರಿಕೆಟರ್ಸ್ ಇದರ ಸಹಯೋಗದೊಂದಿಗೆ ವಿವಿಧ ಆಟೋಟ ಸ್ಪರ್ಧೆಗಳು 2022 ಸೆಪ್ಟೆಂಬರ್ 4 ಮತ್ತು 18 ನೇ ತಾರೀಖಿನಂದು ಶ್ರೀ ಮಹಾವಿಷ್ಣು ಭಜನಾ ಮಂದಿರ ಪರಿಸರದಲ್ಲಿ ನಡೆಯಲಿದೆ.ದಿನಾಂಕ 4/09/2022ನೇ ಆದಿತ್ಯವಾರದಂದು ಬೆಳಗ್ಗೆ 9.00 ರಿಂದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗಾಗಿ ಲಿಂಬೆ ಚಮಚ,ಬಲೂನ್ ಹೊಡೆಯುವ, ಮಡಕೆ ಹೊಡೆಯುವ ಸ್ಪರ್ಧೆಗಳು ನಡೆಯಲಿವೆ.

10 ಗಂಟೆಗೆ ಸರಿಯಾಗಿ ಸಾರ್ವಜನಿಕರ ಏಳು ಸದಸ್ಯರ ತಂಡದ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ. ಹಗ್ಗ ಜಗ್ಗಾಟ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 3333 ಹಾಗೂ ಟ್ರೋಫಿ, ದ್ವಿತೀಯ 2222 ಹಾಗೂ ಟ್ರೋಫಿ, ತೃತೀಯ ಟ್ರೋಫಿ ಮತ್ತು ಚತುರ್ಥ ಟ್ರೋಫಿ ಲಭಿಸಲಿದೆ ಆ ದಿನ ಸಂಜೆ ಬಹುಮಾನ ವಿತರಣೆ ನಡೆಯಲಿದೆ. ಸೆಪ್ಟೆಂಬರ್ 18 ಆದಿತ್ಯವಾರದಂದು ಆಯ್ದ ತಂಡಗಳ ಕ್ರಿಕೆಟ್ ಪಂದ್ಯಾಟ ಮಂದಿರ ಪರಿಸರದ ಮೈದಾನದಲ್ಲಿ ನಡೆಯಲಿದೆ.ಕ್ರಿಕೆಟ್ ಪಂದ್ಯಾಟ ವಿಜೇತ ತಂಡಕ್ಕೆ 3333 ಹಾಗೂ ಟ್ರೋಫಿ ಮತ್ತು ರನ್ನರ್ ಅಪ್ ತಂಡಕ್ಕೆ 2222 ಹಾಗೂ ಟ್ರೋಫಿ ಸಿಗಲಿದೆ.ಪಂದ್ಯಾವಳಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಆಟಗಾರರಿಗೆ ಕೆಲವೊಂದು ವೈಯಕ್ತಿಕ ಪ್ರಶಸ್ತಿ ಲಭಿಸಲಿದೆ. ಪಂದ್ಯಾಟದ ನಂತರ ಸಮಾರೋಪ ಸಮಾರಂಭ ಜರಗಲಿದೆ. ಹಗ್ಗ ಜಗ್ಗಾಟಕ್ಕೆ ಹೆಸರು ನೋಂದಾಯಿಸುವ ತಂಡಗಳು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ..
ಮೋಕ್ಷಿತ್ 8943170476
