ಬೆಂಗಳೂರು : ಸಂಪುಟ ವಿಸ್ತರಣೆಗೆ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ಯಾರಿಗೆಲ್ಲಾ ಮಂತ್ರಿಭಾಗ್ಯ
1) ಹೆಚ್.ಕೆ.ಪಾಟೀಲ್,
2) ಮಂಕಾಳ ವೈದ್ಯ
3) ಶಿವಾನಂದ ಪಾಟೀಲ್,
4) ಶರಣಬಸಪ್ಪ ದರ್ಶನಾಪುರ,
5)ರಹೀಂ ಖಾನ್,
6) ಭೈರತಿ ಸುರೇಶ್,
7) ಕೃಷ್ಣ ಭೈರೇಗೌಡ,
8) ಡಾ.ಶರಣಪ್ರಕಾಶ್ ಪಾಟೀಲ್,
9)ಲಕ್ಷ್ಮೀ ಹೆಬ್ಬಾಳ್ಕರ್,
10) ಲಕ್ಷ್ಮಣ ಸವದಿ,
11) ಕೆ.ವೆಂಕಟೇಶ್,
12) ಮಧು ಬಂಗಾರಪ್ಪ,
13)ಈಶ್ವರ್ ಖಂಡ್ರೆ,
14) ಸಂತೋಷ್ ಲಾಡ್,
15)ವಿನಯ್ ಕುಲಕರ್ಣಿ,
16) ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು
17) ಎಂ.ಸಿ.ಸುಧಾಕರ್
ಮೂಲಗಳ ಪ್ರಕಾರ 17 ಮಂದಿ ಸಚಿವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಬರುವವರೆಗೂ ಕಾದು ನೋಡಬೇಕು.
ಮೇ 27 ರಂದು 24 ಮಂದಿ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶನಿವಾರವೇ ನೂತನ ಸಚಿವರ ಪ್ರಮಾಣವಚನ ನಡೆಯಲಿದ್ದು, ಎಲ್ಲಾ ಖಾತೆ ಭರ್ತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸಿಎಂ ಆಯ್ಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಮುಂದುವರೆದಿದ್ದು, ಮೇ 27 ರಂದು ರಾಜಭವನದಲ್ಲಿ 24 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇ 27 ರಂದು ಬೆಳಗ್ಗೆ 11:45 ಕ್ಕೆ 24 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸರ್ಕಾರದ ಮನವಿ ಮೇರೆಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಶೀಘ್ರದಲ್ಲೇ ಕಾಂಗ್ರೆಸ್ 24 ಮಂದಿ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದು, ದೆಹಲಿಯ ಜಿಆರ್ಜಿ ರಸ್ತೆಯ ಕಾಂಗ್ರೆಸ್ ವಾರ್ ರೂಮ್ನಲ್ಲಿ ನಡೆಯುತ್ತಿದ್ದ ಕರ್ನಾಟಕ ಸಚಿವ ಸಂಪುಟ ರಚನೆ ಬಗ್ಗೆ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಸಭೆ ಮುಕ್ತಾಯಗೊಂಡಿದೆ. ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಆದರೆ ನೂತನ ಸತಿವರ ಪ್ರಮಾಣವಚನ ಸಮಾರಂಭಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದೆ. ಇಂದು 24 ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.