ಮಂಗಳೂರು: ಕೆಮರಾ ಮಾರಾಟದ ಬಗ್ಗೆ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿ ವ್ಯಕ್ತಿಯೋರ್ವರಿಂದ 1.12 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿ ಎ.19ರಂದು ಬೆಳಗ್ಗೆ ಫೇಸ್‌ಬುಕ್ ನೋಡುತ್ತಿದ್ದಾಗ ಅದರ “ಮಾರ್ಕೆಟ್ ಪ್ಲೇಸ್ ಪೇಜ್’ನಲ್ಲಿ ಕೆಮರಾ ಮಾರಾಟದ ಬಗ್ಗೆ ಜಾಹೀರಾತು ಇತ್ತು.
ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ದೂರುದಾರ ವ್ಯಕ್ತಿ ವಿಳಾಸವನ್ನು ಕಳುಹಿಸಿದ್ದರು. ಆ ಬಳಿಕ ಅವರಿಗೆ ಹಲವು ಮೊಬೈಲ್ ಸಂಖ್ಯೆಗಳಿಂದ ಕರೆ ಬಂತು. ಹಲವಾರು ಕಾರಣಗಳನ್ನು ಹೇಳಿ ಹಂತ ಹಂತವಾಗಿ ಅವರ ಖಾತೆಯಿಂದ 1,12,803 ರೂ. ವರ್ಗಾಯಿಸಿಕೊಳ್ಳಲಾಯಿತು. ಆದರೆ ಕೆಮರಾವನ್ನು ಕಳುಹಿಸದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.