Friday, April 19, 2024
spot_img
More

    Latest Posts

    ಏನಿದು ಒಮಿಕ್ರಾನ್ ವೈರಸ್​..? ಲಕ್ಷಣಗಳು ಯಾವುವು..? ಇಲ್ಲಿದೆ ಮಾಹಿತಿ

    ಹೊಸದಾಗಿ ಪತ್ತೆಯಾಗಿರುವ ಕೋವಿಡ್​​ ವೈರಸ್​​ನ ಒಮಿಕ್ರಾನ್​ ರೂಪಾಂತರಿಯಲ್ಲಿ ಎಸ್​ ಜೀನ್​ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.

    ಹೀಗಾಗಿ ಸದ್ಯ ಲಭ್ಯವಿರುವ ಆರ್​ಟಿ ಪಿಸಿಆರ್​ ಪರೀಕ್ಷೆಯಲ್ಲಿ ಒಮಿಕ್ರಾನ್​ನ ಮೂರು ಜೀನ್​ಗಳಲ್ಲಿ ಒಂದನ್ನು ಪತ್ತೆ ಮಾಡುವುದು ಕಷ್ಟವಾಗಿದೆ.

    ಎಸ್​ ಜೀನ್​​ ಪಿಸಿಆರ್ ಟೆಸ್ಟಿಂಗ್​ ಕ್ರಮದಲ್ಲಿ ಈ ರೂಪಾಂತರಿಯನ್ನು ಪತ್ತೆ ಮಾಡಬಹುದಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.

    ಸುಧಾರಿತ ಪ್ರಯೋಗಾಲಯ ಹೊಂದಿದ್ದರಿಂದ ದಕ್ಷಿಣ ಆಫ್ರಿಕಾಗೆ ಈ ರೂಪಾಂತರಿಯನ್ನು ಬಹುಬೇಗನೆ ಕಂಡುಹಿಡಿಯಲು ಸಾಧ್ಯವಾಯ್ತು. ನವೆಂಬರ್​ 19ರಂದು ದಕ್ಷಿಣ ಆಫ್ರಿಕಾದ ಬಹುದೊಡ್ಡ ಖಾಸಗಿ ಪರೀಕ್ಷಾ ಪ್ರಯೋಗಾಲಯದಲ್ಲಿ ರಾಕ್ವೆಲ್​​ ವಿಯಾನಾ 8 ಕೊರೊನಾ ಮಾದರಿಗಳಲ್ಲಿ ಜೀನ್​ನ್ನು ಅನುಕ್ರಮಗೊಳಿಸಿದರು.

    ಪಿಸಿಆರ್​ ಪರೀಕ್ಷೆಗಳನ್ನು ಕೋವಿಡ್​ 19 ರೋಗ ನಿರ್ಣಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ರೋಗಿಯು ಯಾವ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಷ್ಟು ನಿಖರವಾಗಿ ಹೇಳಲಾಗುವುದಿಲ್ಲ.

    ಕೋವಿಡ್​ 19 ಒಮಿಕ್ರಾನ್​ ರೂಪಾಂತರಿಯ ಸಾಮಾನ್ಯ ಲಕ್ಷಣಗಳು :

    1. ಗಂಟಲು ತುರಿಸುವಿಕೆ (ಹಿಂದಿನ ಕೋವಿಡ್​ 19 ಸೋಂಕುಗಳಂತೆ ಗಂಟಲು ನೋವಲ್ಲ)

    2. ಮೈ ಕೈ ನೋವು, ತಲೆನೋವು, ಆಯಾಸ

    3. ದೇಹದ ಉಷ್ಣತೆ ಹೆಚ್ಚುವಿಕೆ (ಎಲ್ಲಾ ಪ್ರಕರಣಗಳಲ್ಲಲ್ಲ)

    4. ಪದೇ ಪದೇ ಕೆಮ್ಮುವುದು( ಎಲ್ಲಾ ಪ್ರಕರಣಗಳಲ್ಲಿ ಅಲ್ಲ)

    5. ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಕಳೆದುಕೊಳ್ಳುವುದು (ಎಲ್ಲಾ ಪ್ರಕರಣಗಳಲ್ಲಿ ಅಲ್ಲ)

    ರೋಗ ನಿರೋಧಕ ಶಕ್ತಿಯ ಕೊರತೆಯೊಂದಿಗೆ ಬೇರೆ ಯಾವುದೇ ಕಾಯಿಲೆ ಇರುವವರು ಈ ರೂಪಾಂತರಿಯಿಂದ ಆದಷ್ಟು ಎಚ್ಚರವಾಗಿ ಇರಬೇಕು.

    ಕೊರೊನಾದ ಇತರೆ ರೂಪಾಂತರಿಗಳಂತೆ ಇದು ಕೂಡ ಅತ್ಯಂತ ಮಾರಣಾಂತಿಕ ರೂಪಾಂತರಿಯಾಗುವ ಸಾಧ್ಯತೆ ಇರುವುದರಿಂದ ಆದಷ್ಟು ಎಚ್ಚರವಾಗಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss