ರಾಮನಗರ: ಜಿಲ್ಲೆಯ ಬಿಡದಿಯಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಾಗಿ ದಾಖಲಾಗಿದ್ದಂತ ಬಾಣಂತಿಯನ್ನು, ಡಿಸ್ಚಾರ್ಜ್ ಮಾಡುವುದಕ್ಕೆ 6 ಸಾವಿರ ಲಂಚಕ್ಕೆ ಅಲ್ಲಿನ ಪ್ರಸೂತಿ ತಜ್ಞೆ ಡಾ.ಶಶಿಕಲಾ ಮತ್ತು ಡಾ.ಐಶ್ವರ್ಯ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಅವರಿಬ್ಬರನ್ನು ಅಮಾನತಗೊಳಿಸಲಾಗಿದೆ.
ಈ ಸಂಬಂಧ ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಾಂತರಾಜು ಅವರು ಆದೇಶ ಹೊರಡಿಸಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿಗಳು ಬಾಣಂತಿಯನ್ನು ಡಿಸ್ಚಾರ್ಜ್ ಮಾಡೋದಕ್ಕಾಗಿ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ನಂತ್ರ ಪ್ರಸೂತಿ ತಜ್ಞೆ ಡಾ.ಶಶಿಕಲಾ ಮತ್ತು ಡಾ.ಐಶ್ವರ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.
ಅಂದಹಾಗೇ ಹೆರಿಗೆಗಾಗಿ ದಾಖಲಾಗಿದ್ದಂತ ರೂಪಾ ಎಂಬುವರ ಪತಿಗೆ ಬಾಣಂತಿ ಡಿಸ್ಚಾರ್ಜ್ ಮಾಡೋದಕ್ಕೆ 6 ಸಾವಿರ ಲಂಚಕ್ಕೆ ಬಿಡದಿಯ ಪ್ರಸೂತಿ ತಜ್ಞೆ ಡಾ.ಶಶಿಕಲಾ ಮತ್ತು ಡಾ.ಐಶ್ವರ್ಯ ಬೇಡಿಕೆ ಇಟ್ಟಿದ್ದರು. ಈ ಆಡಿಯೋ ವೈರಲ್ ಕೂಡ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತ ಆರೋಗ್ಯ ಇಲಾಖೆಯು, ಇಬ್ಬರು ಸಿಬ್ಬಂದಿಗಳ್ನು ಅಮಾನತಗೊಳಿಸಿ ಆದೇಶ ಹೊರಡಿಸಿದೆ.
