Saturday, April 20, 2024
spot_img
More

    Latest Posts

    ದೇವರ ದರ್ಶನ ಪಡೆಯಲು ಅಂಗಿ-ಬನಿಯನ್ ತೆಗೆಯಬೇಕೆಂಬ ನಿಯಮಕ್ಕೆ ಆಕ್ಷೇಪ: ಧಾರ್ಮಿಕ ದತ್ತಿ ಇಲಾಖೆಗೆ ದೂರು

    ಸುಬ್ರಮಣ್ಯ: ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡುವುದುಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಫಲಕ ತೆರವಿಗೆ ಮನವಿ ಮಾಡಲಾಗಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ಸಲ್ಲಿಕೆಯಾಗಿದೆ.ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವಿರುದ್ಧ ದೂರು ನೀಡಲಾಗಿದೆ. ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ.ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ದತಿ ಇಲ್ಲ, ದಿವ್ಯಾಂಗರು ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಚರ್ಮರೋಗವಿದ್ದವರು ಅಂಗಿ ಕಳಚಿದರೆ ಚರ್ಮರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ. ಇದು ಸಂವಿಧಾನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕೂಡಲೇ ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡಬೇಕು ಎಂಬ ಸೂಚನಾ ಫಲಕ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss