ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ಮೂರನೆಯ ವರ್ಷದ ಭ್ರಮರ ಇಂಚರ ನುಡಿಹಬ್ಬ ಡಿಸೆಂಬರ್ 1ರಿಂದ 3 ರವರೆಗೆ ಕಟೀಲು ಪದವೀಪೂರ್ವ ಕಾಲೇಜಿನ ಶ್ರೀ ವಿದ್ಯಾ ಸಭಾಭವನದಲ್ಲಿ ನಡೆಯಲಿದೆ. ನಾಡೋಜ ಕೆ.ಪಿ.ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಬೆಳಿಗ್ಗೆ ಮೆರವಣಿಗೆ ನಡೆಯಲಿದ್ದು ಎಂ. ಶೇಖರ ಪೂಜಾರಿ ನಳಿನ್ ಕುಮಾರ್, ಉಮಾನಾಥ ಕೋಟ್ಯಾನ್, ಆನಂದ ಸಿ. ಕುಂದರ್, ಗುರುಕಿರಣ್. ಪಾದೇಕಲ್ಲು ವಿಷ್ಣು ಭಟ್ಟ ಮುಂತಾದವರು ಭಾಗವಹಿಸಲಿದ್ದಾರೆ. ಖ್ಯಾತ ಚಿಂತಕ ರೋಹಿತ್ ಚಕ್ರತೀರ್ಥ ನರ್ಮ ನಾಡಿನ ಹೆಮ್ಮೆಯ ಇತಿಹಾಸ, ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ನಮ್ಮ ಕನ್ನಡ ಇಂದು ನಿನ್ನೆ ನಾಳೆಯ ಬಗ್ಗೆ ಮಾತನಾಡಲಿದ್ದು ಸಂಜೆ ಕಟೀಲು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವ ನಡೆಯಲಿದೆ. ಡಿ .2 ರಂದು ಕೆ.ಪಿ. ರಾವ್ ಅವರೊಂದಿಗೆ ಸಂವಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ಸಂಸ್ಕೃತ ಸಂಸ್ಕೃತಿ ಬಗ್ಗೆ ಉಪನ್ಯಾಸ. ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರಿಂದ ಯಕ್ಷಗಾನ ಮತ್ತು ಸಂಸ್ಕಾರದ ಕುರಿತು ಮಾತು ಬಳಿಕ ಕಟೀಲು ಶಿಕ್ಷಣ ಸಂಸ್ಥೆಗಳ 40 ವಿದ್ಯಾರ್ಥಿಗಳಿಂದ ಯಕ್ಷಗಾನ ಚಕ್ರವ್ಯೂಹ, ಜನಸಾಮಾನ್ಯ ಸಾಧಕರಾದ ರಾಮಕೃಷ್ಣ ಮಲ್ಯ, ಸುಧಾಕರ ಅಸೈಗೋಳಿ, ಲೀಲಾವತಿ ಗುತ್ತಿಗಾರು. ಯಶೋದಾ ಲಾಯಿಲ, ಅಶೋಕ ಪಚ್ಚನಾಡಿ, ಸುದರ್ಶನ್ ಬೆದ್ರಾಡಿ ಇವರ ಪರಿಚಯ ಸ್ಫೂರ್ತಿಯ ಮಾತುಗಳು ಡಾ. ರವೀಶ ಪಡುಮಲೆ ಇವರಿಂದ ತುಳುವ ಭಾಸೆ ಉಪನ್ಯಾಸ ಸಂಜೆ ಪ್ರೌಢಶಾಲೆಯ ವಾರ್ಷಿಕೋತ್ಸವ ನಡೆಯಲಿದೆ. ತಾ. 3ರಂದು ನುಡಿಹಬ್ಬದಲ್ಲಿ ಹೋರಾಟದ ವಿಚಾರಗೋಷ್ಟಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಹನುಮಂತ ಕಾಮತ್, ಪರಿಸರದ ಬಗ್ಗೆ ದಿನೇಶ್ ಹೊಳ್ಳ ಮಾತನಾಡಲಿದ್ದಾರೆ. ಸೈನಿಕ ಕ್ಯಾಪ್ಟನ್ ನವೀನ್ ನಾಗಪ್ಪ ಕಾರ್ಗಿಲ್ ಯುದ್ದ ಹಾಗೂ ಸೇನೆಯ ಕುರಿತು ಮಾತನಾಡಲಿದ್ದಾರೆ. ರಂಗಭೂಮಿ ಸಿನಿಮಾ ಗೋಷ್ಟಿಯಲ್ಲಿ ಖ್ಯಾತ ಚಿತ್ರನಟರಾದ ರಮೇಶ್ ಭಟ್ ಹಾಗೂ ರಚಿತಾರಾಮ್ ಭಾಗವಹಿಸಲಿದ್ದಾರೆ. ಡಿ.3 ರಂದು ಸಮಾರೋಪದಲ್ಲಿ ಗಣೇಶ್ ಅಮೀನ್ ಸಂಕಮಾರ್ ಮಾತನಾಡಲಿದ್ದು, ಕಟೀಲು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿ ಈಗ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರಾದ ಶಿಕ್ಷಣ ಸಂಸ್ಥೆ ನಡೆಸುವ ವಾಮಂಜೂರು ಸೀತಾರಾಮ ಶೆಟ್ಟಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಂದ್ರಶೇಖರ ಬೆಲ್ಚಡ ಹಾಗೂ ಅದಿವಾಸಿಗಳ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವ ಸಿ.ಎಸ್. ರಮೇಶ್ ಕುಮಾರ್ ಇವರನ್ನು ಸಂಮಾನಿಸಲಾಗುವುದು. ಬಳಿಕ ಪದವೀಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದೆ. ನುಡಿಹಬ್ಬದಲ್ಲಿ ಕಟೀಲು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಚಿತ್ರಗಳು ಕರಕುಶಲ ವಸ್ತುಗಳು ಜನಪದವಸ್ತುಗಳು ಹೀಗೆ ಪ್ರದರ್ಶನ ಪರಿಸರ ಪೂರಕ ವಸ್ತುಗಳ ಮಾರಾಟ ಇದೆ ಎಂದು ಪ್ರಕಟನೆ ತಿಳಿಸಿದೆ.
©2021 Tulunada Surya | Developed by CuriousLabs