ಮಂಗಳೂರು: ನೃತ್ಯ ಸುಧಾ (ರಿ) ಭರತನಾಟ್ಯ ಹಾಗೂ ಸಂಗೀತ ತರಬೇತಿ ಕೇಂದ್ರ ಮಂಗಳೂರು – ಉಡುಪಿ ಪ್ರಸ್ತುತ ಪಡಿಸುವ ನೃತ್ಯೋತ್ಕರ್ಷ -2023 ಏಪ್ರಿಲ್ – 21 ರಂದು ಸಂಜೆ 6.30ಗಂಟೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಕರ್ನಾಟಕ ಕಲಾಶ್ರೀ ನೃತ್ಯ ವಿದುಷಿ ಶ್ರೀಮತಿ ಕಮಲಾ ಭಟ್ ,ನಾಟ್ಯಾಲಯ ಉರ್ವ ಮಂಗಳೂರು ಇವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಂಜೆ 6.30ಕ್ಕೆ ವಿದುಷಿ ಸಿಂಚನ ಎಚ್ ಎಸ್, ಡಾ.ವಿದುಷಿ ಶ್ರೀರಕ್ಷಾ ರಮೇಶ್ ರಾವ್, ವಿದುಷಿ ಶ್ರೀ ಲಕ್ಷ್ಮೀ ಭಟ್, ವಿದುಷಿ ಭೂಮಿಕಾ ಶೆಟ್ಟಿ, ವಿದುಷಿ ದೀಪ್ತಿ ದೇವಾಡಿಗ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಕಲ್ಕೂರ ಪ್ರತಿಷ್ಠಾನ ದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ವಿದ್ವಾನ್ ಕೃಷ್ಣಾಚಾರ್ಯ ಎಚ್ ಭಾಗವಹಿಸಲಿದ್ದಾರೆ