Tuesday, March 19, 2024
spot_img
More

    Latest Posts

    ವಿಮಾನದಲ್ಲಿ ಕೈಕೊಟ್ಟ ಎಸಿ-ಮೂರ್ಛೆ ಹೋದ ಮೂವರು ಪ್ರಯಾಣಿಕರು

     ಇತ್ತೀಚೆಗೆ ಡೆಹ್ರಾಡೂನ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವೊಂದರಲ್ಲಿ ಪ್ರಯಾಣದ ವೇಳೆ AC ಕಾರ್ಯ ನಿರ್ವಹಿಸದ ಕಾರಣ ಮೂವರು ಪ್ರಯಾಣಿಕರು ಮೂರ್ಛೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

    ಡೆಹ್ರಾಡೂನ್‌ನಿಂದ ಮುಂಬೈಗೆ ತೆರಳುತ್ತಿದ್ದ G8 2316 ಫ್ಲೈಟ್‌ನಲ್ಲಿ ವಿಮಾನದ ಕೂಲಿಂಗ್ ಕೈಕೊಟ್ಟಿದೆ. ಇದರಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ವೇಳೆ ಮೂವರು ಪ್ರಯಾಣಿಕರು ಮೂರ್ಛೆ ಹೋಗಿದ್ದು, ಕ್ಯಾನ್ಸರ್ ರೋಗಿಯೊಬ್ಬರಿಗೆ ಉಸಿರಾಟದ ಸಮಸ್ಯೆಯುಂಟಾಗಿದೆ. ಈ ವೇಳೆ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸಾ ಕಿಟ್ ಕೂಡ ಇರಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

    ರೋಶ್ನಿ ವಾಲಿಯಾ ಎಂಬ ಬಳಕೆದಾರರು ಹಂಚಿಕೊಂಡ ವೀಡಿಯೊದಲ್ಲಿ, ಪ್ರಯಾಣಿಕರು ಎದ್ದುನಿಂತು ತಮ್ಮ ಎಸಿ ವೆಂಟ್‌ಗಳನ್ನು ಪರಿಶೀಲಿಸುವುದನ್ನು ತೋರಿಸಿದೆ. ಇಲ್ಲಿ ಮಾತನಾಡಿರುವ ಮಹಿಳೆಯೊಬ್ಬರು, ʻನಮ್ಮ ಫ್ಲೈಟ್ 5.30 ಕ್ಕೆ ಟೇಕ್ ಆಫ್ ಆಯಿತು. ಅದರ 6 ಎಸಿಗಳು ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಕ್ಯಾನ್ಸರ್ ರೋಗಿಯು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಮೂವರು ಪ್ರಯಾಣಿಕರು ಶಾಖದಿಂದಾಗಿ ಮೂರ್ಛೆ ಹೋಗಿದ್ದಾರೆ. ಎಸಿಗಳು ಕಾರ್ಯನಿರ್ವಹಿಸದಿದ್ದರೆ ವಿಮಾನ ಎಂದಿಗೂ ಟೇಕಾಫ್ ಆಗಬಾರದು. ಮಹಿಳೆ ಟಿಕೆಟ್‌ಗಾಗಿ 12,000 ರೂಪಾಯಿ ಪಾವತಿಸಿದ್ದಕ್ಕಾಗಿ ತನ್ನ ಕೋಪವನ್ನು ವ್ಯಕ್ತಪಡಿಸಿದ್ದಾಳೆ. ಇದು ‘ಇಡೀ ವ್ಯವಸ್ಥೆಗೆ ನಾಚಿಕೆಗೇಡು’ ಎಂದ್ದಾಳೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss