ಹೊಸಕೋಟೆ: ಪ್ರೇಯಸಿ ಫೋನ್ ಕಾಲ್ ತೆಗಿಯಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಮೂರ್ಖತನದ ಪರಮಾವಧಿ ಅಂದರೂ ತಪ್ಪಾಗಲಾರದು.
ಹೊಸಕೋಟೆ ತಾಲೂಕಿನ ಡಿ ಹೊಸಹಳ್ಳಿ ಗ್ರಾಮದ ರಾಜು ಮದುವೆಯಾಗಿದ್ದು, ಎರಡು ಮಕ್ಕಳ ತಂದೆ. ಆದರೂ ಬೇರೊಬ್ಬ ಹೆಂಗಸಿನ ಜೊತೆ ಪ್ರೀತಿ-ಪ್ರೇಮದ ಆಟ ನಡೆಸುತ್ತಿದ್ದ. ಕಳೆದರೆಡು ವರ್ಷಗಳಿಂದ ಅವರ ನಡುವೆಯಿದ್ದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು.
ಈ ಮಹಾಶಯ ಇತ್ತೀಚಿಗೆ ಪ್ರೇಯಸಿಯೊಂದಿಗೆ ಜಗಳ ಮಾಡಿಕೊಂಡಿದ್ದ. ನಂತರ ರಾಜಿ ಮಾಡಿಕೊಳ್ಳಲು ಅವಳ ಮನೆಗೆ ಹೋಗಿದ್ದನು. ಆದರೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಅವನನ್ನು ಕ್ಯಾರೆ ಮಾಡಲಿಲ್ಲ. ಆಮೇಲೆ ಪೋನ್ ಕರೆಯ ಮೂಲಕ ಪ್ರೇಯಸಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗಲೂ ಆಕೆ ಸ್ಪಂದಿಸಿಲ್ಲ. ಇದರಿಂದ ಹತಾಷನಾದ ರಾಜು ಅವಳ ಮನೆ ಮುಂದೆಯೇ ನೇಣು ಬಿಗಿದುಕೊಂಡು ಸತ್ತಿದ್ದಾನೆ.