Saturday, June 25, 2022

SSLC ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ ಕಲ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಸಿಟಿ) ತಿಳಿಸಿದೆ. SSLC ಪೂರಕ...
More

  Latest Posts

  ಕುಂದಾಪುರ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ

  ಕುಂದಾಪುರ: ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ, ಆನೆ ಕಟ್ಟುವ ಕಲ್ಲಿನ ಕಂಬವೊಂದು ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ನಿನ್ನೆ ಪತ್ತೆಯಾಗಿದೆ. ಶತವಸಂತಗಳಿಗೂ ಹಿಂದಿನ ಕಾಲದ ರಾಜರ, ಆನೆ...

  BIG NEWS: ಹಳ್ಳದಲ್ಲಿ ತೇಲಿ ಬಂದ 7 ನವಜಾತ ಶಿಶುಗಳ ಶವ; ಕಂಗಾಲಾದ ಗ್ರಾಮಸ್ಥರು

  ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ 7 ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ. ಆಗತಾನೇ...

  ರಕ್ತ ಪರೀಕ್ಷೆಯ ಮೂಲಕ ʻಸ್ತನ ಕ್ಯಾನ್ಸರ್‌ʼ ಪತ್ತೆ: ಭಾರತದಲ್ಲೂ ಈ ತಂತ್ರಜ್ಞಾನ ಲಭ್ಯ

  ದೆಹಲಿ: ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ತಂತ್ರಜ್ಞಾನ ಈಗ ಭಾರತದಲ್ಲೂ ಲಭ್ಯವಿದೆ.

  ಮಂಗಳೂರು: ಜುಲೈ 3ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

  ಮಂಗಳೂರು: ಬಿಲ್ಲವ ಸಂಘ (ರಿ.) ಉರ್ವ -ಅಶೋಕನಗರ ವತಿಯಿಂದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ,ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜುಲೈ-3 ಆದಿತ್ಯವಾರದಂದು ಉರ್ವ ಬಿಲ್ಲವ ಸಂಘದ ನಾರಾಯಣ...

  ಉಡುಪಿ: 18 ಖಾಸಗಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳ ನೇಮಕ

  ಉಡುಪಿ, ಮೇ 6 ವರದಿ): ಉಡುಪಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಅವಲಂಬಿಸುವವರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಬೆಡ್ ಹಾಗೂ ಆಕ್ಸಿಜನ್ ಬೆಡ್ ಗಳ ಬೇಡಿಕೆಯೂ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬರುವ ಸೋಂಕಿತರಿಗೆ ಯಾವುದೇ ತೊಂದರೆ ಆಗದಂತೆ ಸಮರ್ಪಕವಾಗಿ ಬೆಡ್, ಆಕ್ಸಿಜನ್ ಬೆಡ್ ಗಳನ್ನು ಪೂರೈಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

  ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಂಕು ಬಾಧಿತ ವ್ಯಕ್ತಿಗಳ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರಕಾರದಿಂದ ಆಯಾ ಆಸ್ಪತ್ರೆಗಳಲ್ಲಿರುವ ಬೆಡ್ ಹಾಗೂ ಐಸಿಯು ಮುಂತಾದ ವೈದ್ಯಕೀಯ ಸೌಲಭ್ಯಗಳ ಆಧಾರದಲ್ಲಿ ಸರಕಾರಿ ಕೋಟಾವನ್ನು ನಿಗದಿ ಪಡಿಸಲಾಗಿದೆ.

  ಆದರೆ ಕೆಲವು ಆಸ್ಪತ್ರೆಗಳು ಸರಕಾರಿ ಕೋಟಾದ ಬೆಡ್‌ಗಳನ್ನು ಸೋಂಕಿತರಿಗೆ ನೀಡದಿರುವ ಹಾಗೂ ಚಿಕಿತ್ಸೆಯನ್ನು ಸಮರ್ಪಕ ರೀತಿಯಲ್ಲಿ ನೀಡದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಇದು ಕೋವಿಡ್-19 ಎರಡನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಆಡಳಿತಕ್ಕೆ ಸಮಸ್ಯೆಯನ್ನು ಉಂಟುಮಾಡುತ್ತಿದೆ.

  ಆದುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳು ದಾಖಲಾಗುವ ಸಂದರ್ಭದಲ್ಲಿ ಬೆಡ್ ವ್ಯವಸ್ಥೆ ಹಾಗೂ ಅಗತ್ಯವಿದ್ದ ಪ್ರಕರಣಗಳಲ್ಲಿ ಅಕ್ಸಿಜನೇಟೆಡ್ ಬೆಡ್‌ಗಳ ವ್ಯವಸ್ಥೆ ಮಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಪ್ರತಿದಿನ ಭೇಟಿ ನೀಡಿ ಪರಿಶೀಲಿಸಲು ಹಾಗೂ ಆಯಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲು ಖಾಸಗಿ ಆಸ್ಪತ್ರೆ ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  ಆಸ್ಪತ್ರೆಯ ವಿವರ ಹಾಗೂ ನೇಮಕಗೊಂಡ ನೋಡೆಲ್ ಅಧಿಕಾರಿಗಳು:
  *1.ಆದರ್ಶ ಆಸ್ಪತ್ರೆ ಕುಂದಾಪುರ: ಭಾನು ನಾಯ್ಕ, ಸಿದ್ಧಾಪುರ ವಾರಾಹಿ ರಿಸರ್ವ್ ಪ್ರೋಜೆಕ್ಟ್ ಉಪವಿಭಾಗದ ಸಹಾಯಕ ಅಭಿಯಂತರ (ಮೊಬೈಲ್: 9743177854).
  2.ಚಿನ್ಮಯಿ ಆಸ್ಪತ್ರೆ ಕುಂದಾಪುರ: ಡಾ.ಸೂರ್ಯ ನಾರಾಯಣ ಉಪಾಧ್ಯ, ಪಶು ಸಂಗೋಪನಾ ಇಲಾಖೆ ಕುಂದಾಪುರದ ಸಹಾಯಕ ನಿರ್ದೇಶಕ (ಮೊ:9448850501).
  3.ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ: ಹರ್ಷವರ್ಧನ, ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಅಭಿಯಂತರರು ಕುಂದಾಪುರ (ಮೊ:9844818655).
  4.ಶ್ರೀದೇವಿ ನರ್ಸಿಂಗ್ ಹೋಮ್ ಕುಂದಾಪುರ: ಸಿ.ರಘುರಾಮ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ವಂಡ್ಸೆ (ಮೊ:8277932519).
  5.ಶ್ರೀಮಂಜುನಾಥ ಆಸ್ಪತ್ರೆ ಕೋಟೇಶ್ವರ: ಕುಸುಮಾಕರ ಶೆಟ್ಟಿ, ಯುವಜನ ಮತ್ತು ಸೇವಾ ಕ್ರೀಡಾಧಿಕಾರಿ ಕುಂದಾಪುರ (ಮೊ:9611819350).
  6.ಸರ್ಜನ್ಸ್ ಹಾಸ್ಪಿಟಲ್ ಕೋಟೇಶ್ವರ: ರಾಜೇಂದ್ರ, ವಿಸ್ತರಣಾಧಿಕಾರಿ ರೇಷ್ಮೆ ಇಲಾಖೆ ಕುಂದಾಪುರ (ಮೊ:94484457831).
  7.ವಿನಯ ಆಸ್ಪತ್ರೆ ಕುಂದಾಪುರ: ಅಶೋಕ್, ಸಹಾಯಕ ಅಭಿಯಂತರರು, ನಂ.1 ವಾರಾಹಿ ರಿಸರ್ವ್ ಪ್ರೋಜೆಕ್ಟ್ ಉಪವಿಭಾಗ ಸಿದ್ಧಾಪುರ (ಮೊ: 8971138955).
  8.ಡಾ.ಎನ್.ಆರ್.ಆಚಾರ್ಯ ಆಸ್ಪತ್ರೆ ಕೋಟೇಶ್ವರ: ಪ್ರೀತಮ್, ಸಹಾಯಕ ಅಭಿಯಂತರ ನಂ-3 ವಾರಾಹಿ ರಿಸರ್ವ್ ಪ್ರೋಜೆಕ್ಟ್ ಉಪವಿಭಾಗ ಸಿದ್ಧಾಪುರ (ಮೊ:8277721129).
  9.ಆದರ್ಶ ಆಸ್ಪತ್ರೆ ಉಡುಪಿ: ಅರುಣ್‌ಕುಮಾರ್, ಯೋಜನಾ ನಿರ್ದೇಶಕ ನಿರ್ಮಿತಿ ಕೇಂದ್ರ ಮಣಿಪಾಲ (ಮೊ:9448287341).
  10.ಸಿಟಿ ಆಸ್ಪತ್ರೆ ಉಡುಪಿ: ವೀಣಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಉಡುಪಿ (ಮೊ:9611282731).

  11.ಗಾಂಧಿ ಆಸ್ಪತ್ರೆ ಉಡುಪಿ: ದೇವಿಪ್ರಸಾದ್, ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ (ಮೊ:9480878012).
  12.ಹೈಟೆಕ್ ಆಸ್ಪತ್ರೆ ಉಡುಪಿ: ಭುವನೇಶ್ವರಿ, ಉಪನಿರ್ದೇಶಕರು ತೋಟಗಾರಿಕಾ ಇಲಾಖೆ ಉಡುಪಿ (ಮೊ:9448999225),.
  13.ಕಸ್ತೂರ್‌ಬಾ ಆಸ್ಪತ್ರೆ ಮಣಿಪಾಲ: ಅನಿತಾ ಬಿ.ಮುಂಡ್ಕೂರು, ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಉಡುಪಿ (ಮೊ:9243388835).
  14.ಮಿಷನ್ ಆಸ್ಪತ್ರೆ ಉಡುಪಿ: ವಿಜಯಾ ಹೆಗ್ಡೆ, ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಮಣಿಪಾಲ (ಮೊ:9845380806).
  15.ನ್ಯೂ ಸಿಟಿ ಆಸ್ಪತ್ರೆ ಉಡುಪಿ: ನಾಗಶಯನ, ಸಹಾಯಕ ಅಭಿಯಂತರರು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗ ಉಡುಪಿ (ಮೊ: 9480346084).

  ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ: ಅಶೋಕ್, ಕಾರ್ಯ ನಿರ್ವಾಹಕ ಅಭಿಯಂತರು ಲೋಕೋಪಯೋಗಿ ಇಲಾಖೆ ಉಡುಪಿ (ಮೊ: 9448624164).
  17.ಪ್ರಣವ್ ಆಸ್ಪತ್ರೆ ಬ್ರಹ್ಮಾವ: ಗುರುದತ್, ಸಹಾಯಕ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್ ಉಡುಪಿ (9964669016).

  ಮಹೇಶ್ ಆಸ್ಪತ್ರೆ ಬ್ರಹ್ಮಾವ: ಕುಮಾರ್ ಬೆಕ್ಕೇರಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ (ಮೊ:9632959459).
  ಈ ನಿಯೋಜಿತ ಅಧಿಕಾರಿಗಳು ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾವುದೇ ತರವಾದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರಡಿ ಹಾಗೂ ಎಪಿಡಮಿಕ್ ಡಿಸೀಸಸ್ ರೆಗ್ಯುಲೇಷನ್ ಆ್ಯಕ್ಟ್‌ನಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

  Latest Posts

  ಕುಂದಾಪುರ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ

  ಕುಂದಾಪುರ: ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ, ಆನೆ ಕಟ್ಟುವ ಕಲ್ಲಿನ ಕಂಬವೊಂದು ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ನಿನ್ನೆ ಪತ್ತೆಯಾಗಿದೆ. ಶತವಸಂತಗಳಿಗೂ ಹಿಂದಿನ ಕಾಲದ ರಾಜರ, ಆನೆ...

  BIG NEWS: ಹಳ್ಳದಲ್ಲಿ ತೇಲಿ ಬಂದ 7 ನವಜಾತ ಶಿಶುಗಳ ಶವ; ಕಂಗಾಲಾದ ಗ್ರಾಮಸ್ಥರು

  ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ 7 ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ. ಆಗತಾನೇ...

  ರಕ್ತ ಪರೀಕ್ಷೆಯ ಮೂಲಕ ʻಸ್ತನ ಕ್ಯಾನ್ಸರ್‌ʼ ಪತ್ತೆ: ಭಾರತದಲ್ಲೂ ಈ ತಂತ್ರಜ್ಞಾನ ಲಭ್ಯ

  ದೆಹಲಿ: ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ತಂತ್ರಜ್ಞಾನ ಈಗ ಭಾರತದಲ್ಲೂ ಲಭ್ಯವಿದೆ.

  ಮಂಗಳೂರು: ಜುಲೈ 3ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

  ಮಂಗಳೂರು: ಬಿಲ್ಲವ ಸಂಘ (ರಿ.) ಉರ್ವ -ಅಶೋಕನಗರ ವತಿಯಿಂದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ,ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜುಲೈ-3 ಆದಿತ್ಯವಾರದಂದು ಉರ್ವ ಬಿಲ್ಲವ ಸಂಘದ ನಾರಾಯಣ...

  Don't Miss

  `ಹಿಜಾಬ್’ ವಿವಾದ : ಕಾಲೇಜಿನಿಂದ ವರ್ಗಾವಣೆ ಪ್ರಮಾಣಪತ್ರ ಕೋರಿದ ಐವರು ವಿದ್ಯಾರ್ಥಿನಿಯರು!

  ಮಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಶುರುವಾಗಿದ್ದು, ಹಿಜಾಬ್ ಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮತ್ತೆ ಐವರು ವಿದ್ಯಾರ್ಥಿನಿಯರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹಂಪನಕಟ್ಟೆ...

  ಕಾರ್ಕಳ: ಜೀಪ್ ಪಲ್ಟಿ- ಯುವತಿ ಮೃತ್ಯು, ಮೂವರಿಗೆ ಗಂಭೀರ ಗಾಯ

  ಕಾರ್ಕಳ : ಬೆಳ್ಮಣ್‌ನ ಮುಂಡ್ಕೂರು ಸಮೀಪದ ಸಂಕಲಕರಿಯ ಎಂಬಲ್ಲಿ ಜೀಪು ಪಲ್ಟಿಯಾದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರನ್ನು...

  ಕರ್ನಾಟಕಕ್ಕೆ ಹೋಗುತ್ತಿದ್ದೇನೆ; ಕನ್ನಡದಲ್ಲಿಯೇ ಟ್ವೀಟ್ ಮಾಡಿ ತಿಳಿಸಿದ ಪ್ರಧಾನಿ ಮೋದಿ

  ನವದೆಹಲಿ: ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿ, ಕಾರ್ಯಕ್ರಮಗಳ ವಿವರವನ್ನು ತಿಳಿಸಿದ್ದಾರೆ. ಮೊದಲು ಬೆಂಗಳೂರಿನ ಮಿದುಳು...

  ಮಂಗಳೂರು – ಮುಂಬಯಿ: ಇಂಡಿಗೋ ವಿಮಾನಯಾನ ಆರಂಭ

  ಮಂಗಳೂರು: ಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ರವಿವಾರ ಆರಂಭಗೊಂಡಿದೆ. ಇಂಡಿಗೋದ ಏರ್‌ಬಸ್‌ ಎ320 ವಿಮಾನ ಪ್ರತಿದಿನ ಬೆಳಗ್ಗೆ 8.50ಕ್ಕೆ ಮುಂಬಯಿಯಿಂದ ಹೊರಟು...

  ಉಡುಪಿ: ಕಡಿಯಾಳಿ ದೇವಸ್ಥಾನದ ತಿರುಗುವ ಮುಚ್ಚಿಗೆಗೆ ಅಮಿತಾಬ್ ಬಚ್ಚನ್ ಮೆಚ್ಚುಗೆ

  ಉಡುಪಿ: ಕಡಿಯಾಳಿ ದೇವಸ್ಥಾನದ ತಿರುಗುವ ಮುಚ್ಚಿಗೆಗೆ ಅಮಿತಾಬ್ ಬಚ್ಚನ್ ಮೆಚ್ಚುಗೆಉಡುಪಿ: ದೇಶಾದ್ಯಂತ ಮೆಚ್ಚುಗೆ ಗಳಿಸಿದ ಕಡಿಯಾಳಿ ದೇವಳದ ತಿರುಗುವ ಮುಚ್ಚಿಗೆ ಮತ್ತು ತಾಯಿ ಮಹಿಷಮರ್ದಿನಿಯ ಚಿತ್ರವನ್ನು ಬಿಗ್ ಬಿ ಖ್ಯಾತಿಯ...