ಬೆಂಗಳೂರು: ಸದ್ಯಕ್ಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಮಾಡುವುದಿಲ್ಲ ಅಂತ ಸಚಿವ ಸುನೀಲ್ ಕುಮಾರ್ ಅವರು ಹೇಳಿದ್ದಾರೆ. ಅವರು ಇಂದು ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ವರದಿಗಳನ್ನು ಗಮನಿಸಿ ಈ ಹೇಳಿಕೆಯನ್ನು ನೀಡಿದ್ದು, ಇದೇ ವೇಳೆ ಅವರು ಯಾವುದೇ ಕಾರಣಕ್ಕೂ ಸದ್ಯಕ್ಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಮಾಡುವುದಿಲ್ಲ, ಇದಲ್ಲದೇ ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಯಾವುದೇ ಆದೇಶ ಕೂಡ ಬಂದಿಲ್ಲ ಅಂತ ಹೇಳಿದರು.
ಇದೇ ವೇಳೇ ಅವರು ಮಾತನಾಡುತ್ತ, ಕೆಇಆರ್ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳನ್ನು ಮಾತ್ರ ಪರಿಷ್ಕರಿಸಿದೆ, ಇದು ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ಪರಿಣಾಮ ಬೀರುತ್ತದೆ ಹೊರತು ಗ್ರಾಹಕರ ಮೇಲೆ ಅಲ್ಲ ಅಂತ ಅವರು ಹೇಳಿದರು.
ಕೆಲ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ಬೆಲೆ ಏರಿಕೆ ವರದಿಯು ಸುಳ್ಳು, ಇದಲ್ಲದೇ ರಾಜ್ಯ ಸರ್ಕಾರವು ಗ್ರಾಹಕರಿಗೆ ವಿದ್ಯುತ್ ದರವನ್ನು ಪರಿಷ್ಕರಿಸಲು ನಿರ್ಧರಿಸಿದೆ ಅಂತ ಕೂಡ ಹೇಳಲಾಗುತ್ತಿದೆ, ಆದರ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಅಂತ ಅವರು ಇದೇ ವೇಳೆ ಹೇಳಿದರು.
ಇನ್ನೂ ವರ್ಷಕ್ಕೊಮ್ಮೆ ಮಾತ್ರ ವಿದ್ಯುತ್ ದರವನ್ನು ಮಾತ್ರ ಪರಿಷ್ಕರಿಸುವುದು ನಮ್ಮಲ್ಲಿ ರೂಢಿಯಲ್ಲಿದೆ ಆದ್ದರಿಂದ, ದರ ಏರಿಕೆಯ ವದಂತಿಗಳ ಬಗ್ಗೆ ಸಾರ್ವಜನಿಕರು ಚಿಂತಿಸುವ ಅಗತ್ಯವಿಲ್ಲ ಅವರು ಇದೇ ವೇಳೆ ಹೇಳಿದರು.
