ಮಾನ್ಯ ಶಾಸಕರಾದ ಯು.ಟಿ.ಖಾದರ್ ಈ ಬಾರಿ ಬಹುಮತಗಳಿಂದ ಕ್ಷೇತ್ರದ ಜನತೆಯ ಆಶೀರ್ವಾದ ಪಡೆದು ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷರಾಗಿ ಅಯ್ಕೆಯಾಗಿದ್ದ ಇವರು ಕಳೆದ ಶನಿವಾರ ಕೋಟೆಕಾರು ಕಾಂಗ್ರೆಸ್ ಪಕ್ಷದ ಮಾಜಿ ಕೌನ್ಸಿಲರ್ ಹಾಗೂ ಜನಾನುರಾಗಿ ಕೋಟೆಕಾರು ವಲಯ ಕಾಂಗ್ರೆಸ್ ಮುಖಂಡರಾದ ಹಮೀದ್ ಹಸನ್ ಮಾಡೂರು ಇವರ ಮನೆಗೆ ಬಂದಾಗ ಅವರ ಮನೆಯಲ್ಲಿ ವಿಜ್ರಂಭಣೆಯಿಂದ ಶಾಸಕರನ್ನು ಗೌರವಿಸಿ ಸನ್ಮಾನಿಸಲಾಯಿತು, ಹಮೀದ್ ಹಸನ್ ಇವರ ಮಗಳ ಮದುವೆಗೆ ಗೈರು ಹಾಜರಿದ್ದ ಹಿನ್ನಲೆ ಅವರು ವಧುವಿನ ಮನೆಗೆ ಬಂದು ಅಲ್ಲಿ ವಧು ವರರನ್ನು ಆಶೀರ್ವದಿಸಿ ಜನರ ಅಹವಾಲನ್ನು ಸ್ವೀಕರಿಸಿ ಸುಮಾರು ಎರಡು ಗಂಟೆಗಳ ಕಾಲ ತಮ್ಮ ಅಮೂಲ್ಯವಾದ ಸಮಯವನ್ನು ಕಾರ್ಯಕರ್ತರೊಡನೆ ನಗು ನಗುತ್ತ ಆನಂದ ಪಟ್ಟು ಸಂಭ್ರಮಿಸಿ ಕೊಂಡ ಆ ಅಮೃತ ಗಳಿಗೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಹಾಗೂ ಅವರ ಅಭಿಮಾನಿಗಳು ಖಂಡಿತ ಎಂದೂ ಮರೆಯಲಾರರು.

ಈ ಸಂದರ್ಭದಲ್ಲಿ ಕೋಟೆಕಾರು ವಲಯ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ಕಿರಿಯ ನಾಯಕರು ಕೌನ್ಸಿಲರ್ ಗಳು ಕಾರ್ಯಕರ್ತರು ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯರಾದ ಶ್ರೀಯುತ ಯೋಗೀಶ್ ಶೆಟ್ಡಿ ಜಪ್ಪು ಮತ್ತು ಧಾರ್ಮಿಕ ಧತ್ತಿ ಇಲಾಖೆಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಭಾರತೀಯ ಸೇನಾ ಕಮಾಂಡರ್ ಶ್ರೀಯತ ಕೃಷ್ಟ ಗಟ್ಟಿ ಅಡ್ಕ , ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರೇಖಾ ಚಂದ್ರಹಾಸ, ಕೋಟೆಕಾರು ವಲಯ ಅಧ್ಯಕ್ಷರಾದ ಸುಕುಮಾರ್ ಗಟ್ಟಿ, ಬ್ಲಾಕ್ ಮಹಿಳಾ ಅದ್ಯಕ್ಷೆ ಚಂದ್ರಿಕಾ ರೈ ಕೋಟೆಕಾರು, ವಲಯ ಕಾರ್ಯದರ್ಸಿ ಆಹಮದ್ ಅಜಿನಡ್ಕ,ಪುಷ್ಟಿ ಮಹಮ್ಮದ್, ಮೊಯಿದಿನ್ ಕೊಮರಂಗಳ, ಉಳ್ಳಾಲ ಇಂಟಕ್ ಅಧ್ಯಕ್ಷೆ ಕಲಾವತಿ ಸರಾವನ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಪ್ರಭಾವತಿ ಶೆಟ್ಟಿ ,ಆಸೀಪ್ ಮಾಡೂರು, ಮಜೀದ್ , ಮೊಹಿದಿನ್ , ಸಿರಾಜ್ , ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
