ಹವ್ಯಾಸಿ ಬರಹಗಾರ ಸದಾಶಿವ ಪೆರುವಾರು ರವರು ರಚಿಸಿರುವ ನೆನಪಿನಂಗಳದಿ’ ಸ್ವರಚಿತ ಕವನಗಳು ಪುಸ್ತಕವನ್ನು ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 9 ಗುರುವಾರದಂದು ಮಂಗಳೂರಿನ ವುಡ್ ಲ್ಯಾಂಡ್ ಹೋಟೆಲ್‌ನಲ್ಲಿ ಸಂಜೆ 5 ಗಂಟೆಗೆ ಸದಾಶಿವ ಪರುವಾರರ ಸಮ್ಮುಖದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು. ಸದಾಶಿವ ಪೆರುವಾರರವರು ವೃತ್ತಿಯಲ್ಲಿ ಸರ್ವಿಸ್ ಟೆಕ್ನಿಷನ್ ಆಗಿ ಊರೂರು ಸುತ್ತುತ್ತಿರುವ ಸಂದರ್ಭದಲ್ಲಿ ಆಯಾಸ ನೀಗಿಸಲು ಎಲ್ಲೋ ಒಂದೆಡೆ ನಿಂತಾಗ ತನ್ನೆದುರಿಗೆ ಕಂಡ ನಿಜ ಚಿತ್ರಣಗಳನ್ನು ಪದ ಪುಂಜವಾಗಿಸಿ ತನ್ನ ಗೆಳೆಯರಿಗೆ ತೋರಿಸಿದಾಗ, ಅವರು ನೀಡಿದ ಪ್ರೋತ್ಸಾಹದ ಫಲವಾಗಿ ಮುದ್ರಣಗೊಂಡ ಕವನ ಸಂಕಲನ ನೆನಪಿನಂಗಳದಿ’, ಸಮಾರಂಭ ಉದ್ಘಾಟಿಸಿ, ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್ ದ.ಕ ಇದರ ಮಾಜಿ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಮುಖ್ಯಸ್ಥರಾದ ಪ್ರದೀಪ್ ಕುಮಾರ್ ಕಲ್ಕೂರ ರವರು ತುಳುವರು ಸಹೃದಯಿಗಳು, ಎಲ್ಲ ಭಾಷೆಗಳನ್ನು ಪ್ರೀತಿಸುವವರು, ನಾವು ನಮ್ಮ ತುಳುನಾಡಿನ ಸಂಪ್ರದಾಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಮುಂದಿನ ಯುವ ಪೀಳಿಗೆಯ ಮೇಲಿದೆ. ಸಾಹಿತ್ಯದ ಮೂಲಕ ಎಲ್ಲರೂ ಜಾತಿ ಮತ ಭೇದವಿಲ್ಲದೆ ಒಟ್ಟಾಗಿ ಜೀವಿಸಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಒಪ್ಪು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ನ್ಯಾಯವಾದಿ ರಾಘವೇಂದ್ರ ರಾವ್, ‘ನೃತ್ಯ ಸುಧ’ ಇದರ ಸ್ಥಾಪಕ ನಿರ್ದೇಶಕರಾದ ಸೌಮ್ಯ ಸುಧೀಂದ್ರ ರಾವ್ ರವರು ‘ನೆನಪಿನಂಗಳದ’ ಕವನ ಸಂಕಲನದ ಬಗ್ಗೆ ಸೂರ್ತಿಯ ಮಾತುಗಳನ್ನಾಡಿದರು. ಯಕ್ಷಗಾನ ಕಲಾವಿದ ಭುವನ್ ಶೆಟ್ಟಿ ಪ್ರಾರ್ಥನೆ ಗೈದರು. ಪ್ರಶಾಂತ್ ಭಟ್ ಕಡಬ ಕಾರ್ಯಕ್ರಮ ನಿರ್ವಹಿಸಿದರು. ಗಂಗಾಧ ಅತ್ತಾವರ್ ರವರು ಧನ್ಯವಾದ ಗೈದರು, ಸದಾಶಿವ ಪೆರುವಾ ಅವರ ಸ್ನೇಹಿತರು, ಬಂಧುಗಳು ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.