ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಜೇಸಿ ಸಪ್ತಾಹ 2022 ದ ಅಂಗವಾಗಿ ಕುಡಿಯುವ ನೀರಿನ ಘಟಕವನ್ನು ನಾವೂರು ಸರಕಾರಿ ಪ್ರೌಢಶಾಲೆಗೆ ನೀಡಲಾಯಿತು. ಮತ್ತು ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್, ಕಾರ್ಯಕ್ರಮ ನಿರ್ದೇಶಕಿ ಗಾಯತ್ರಿ ಲೋಕೇಶ್, ಸದಸ್ಯರಾದ ಅಶ್ವಿನಿ.ಬಿ.ಎಸ್. ಮುಖ್ಯಶಿಕ್ಷಕರಾದ ಅರ್ಚನಾ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ ಕೆ ಸ್ವಾಗತಿಸಿ, ಶಿಕ್ಷಕಿ ಕವಿತಾ ಭಂಡಾರಿ ವಂದಿಸಿದರು. ಶಿಕ್ಷಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
