Tuesday, September 17, 2024
spot_img
More

    Latest Posts

    JOB ALERT : ‘ಪದವಿ’ ಪಾಸಾದ ಯುವಕರಿಗೆ ಗುಡ್ ನ್ಯೂಸ್ : ನವಮಂಗಳೂರು ಬಂದರಿನಲ್ಲಿ ಉದ್ಯೋಗವಕಾಶ

    ಮಂಗಳೂರು : ಪದವಿ ಪಾಸಾದ ಯುವಕರಿಗೆ ಸುವರ್ಣಾವಕಾಶ.. ನವಮಂಗಳೂರು ಬಂದರು ಟ್ರಸ್ಟ್ ನಲ್ಲಿ 2 ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಡಿಸೆಂಬರ್ 30, 2022 ಕೊನೆಯ ದಿನವಾಗಿದ್ದು,.

    ಆಫ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ನವ ಮಂಗಳೂರು ಬಂದರು ಟ್ರಸ್ಟ್ ತಿಳಿಸಿದೆ, ಆಯ್ಕೆಯಾದವರಿಗೆ 40,000-1,40,000 ರೂಪಾಯಿವರೆಗೂ ಮಾಸಿಕ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನವ ಮಂಗಳೂರು ಬಂದರು, ಪ್ರಾಧಿಕಾರ ಪಣಂಬೂರು ಮಂಗಳೂರು -575010 ಈ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆ ದಿನವಾಗಿದೆ. ಲಿಖಿತ, ಸಂದರ್ಶನದ ಮೂಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನವ ಮಂಗಳೂರು ಬಂದರು ಟ್ರಸ್ಟ್ ಸಂಪರ್ಕಿಸಬಹುದಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss