Thursday, March 28, 2024
spot_img
More

    Latest Posts

    ನಂದಿಬೆಟ್ಟದಲ್ಲಿ 300 ಅಡಿ ಪ್ರಪಾತಕ್ಕೆ ಉರುಳಿದ್ದ ವಿದ್ಯಾರ್ಥಿ -ಹೆಲಿಕಾಫ್ಟರ್ ಮೂಲಕ ರಕ್ಷಣೆ

    ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಟ್ರಕ್ಕಿಂಗ್​​​​ ವೇಳೆ ಜಾರಿ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡಿದ್ದ ದೆಹಲಿ ಮೂಲದ ವಿದ್ಯಾರ್ಥಿಯನ್ನು ಹೆಲಿಕಾಪ್ಟರ್ ಮೂಲಕ ಏರ್‌ಫೋರ್ಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

    ದೆಹಲಿ ಮೂಲದ 19 ವರ್ಷದ ನಿಶಾಂತ್ ಗುಲ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವೀಕೆಂಡ್ ಎಂದು ಸ್ನೇಹಿತರ ಜೊತೆ ನಂದಿಬೆಟ್ಟಕ್ಕೆ ಇಂದು ಬಂದಿದ್ದ. ಈ ವೇಳೆ ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತ ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾನೆ. ಪರಿಣಾಮ ನಿಶಾಂತ್ ಉಳಿಸಲು ಆಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ.

    ಏರ್ ಫೋರ್ಸ್ ಅಧಿಕಾರಿಗಳ ಸಹಾಯದಿಂದ ನಿಶಾಂತ್ ಗುಲ್ ರಕ್ಷಣೆ ಮಾಡಲಾಗಿದೆ. ಬೆಟ್ಟದಿಂದ ಅಪಾಯಕಾರಿ ಜಾಗಕ್ಕೆ ಬಿದ್ದ ಹಿನ್ನೆಲೆ ನಿಶಾಂತ್ ಬೆನ್ನಿಗೆ ಗಂಭೀರ ಗಾಯವಾಗಿದೆ. ಪರಿಣಾಮ ಹೆಲಿಕಾಪ್ಟರ್ ಮೂಲಕವೇ ಯಲಹಂಕ ಏರ್ ಬೇಸ್‌ಗೆ ನಿಶಾಂತ್‍ನನ್ನು ರವಾನೆ ಮಾಡಲಾಗಿತ್ತು. ಅಲ್ಲಿಂದ ಅಸ್ಟರ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss