ಮೈಸೂರು: ಒಂದೇ ಕುಟುಂಬದ ನಾಲ್ವರು ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಮೈಸೂರು ನಗರದ ಚಾಮುಂಡಿ ಪುರಂನಲ್ಲಿ ನಡೆದಿದೆ. ಮಹದೇವಸ್ವಾಮಿ ಮೂಲತಃ ಮೈಸೂರು ತಾಲೂಕಿನ ಬರಡನಪುರ ಗ್ರಾಮ್ ಮಹದೇವ ಸ್ವಾಮಿ (48), ಇವರ ಪತ್ನಿ ಅನಿತಾ(35), 17 ಹಾಗೂ 15 ವರ್ಷ ವಯಸ್ಸಿನ ಪುತ್ರಿಯರು ಶವವಾಗಿ ಪತ್ತೆಯಾದವರು. ಇವರು ಎರಡು ತಿಂಗಳ ಹಿಂದಷ್ಟೇ ಚಾಮುಂಡಿಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ಧರು. ಮಹದೇವ ಸ್ವಾಮಿ ಶವ ಮನೆಯ ಹಾಲ್ನಲ್ಲಿ ಪತ್ತೆಯಾಗಿದ್ದರೆ, ಹೆಂಡತಿ ಅನಿತಾ ಮೃತದೇಹ ಕುರ್ಚಿಯ ಮೇಲೆ, ದೊಡ್ಡ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಚಿಕ್ಕ ಮಗಳ ಶವ ಕೊಠಡಿಯಲ್ಲಿ ಪತ್ತೆಯಾಗಿದೆ. ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಲಭಾದೆಯಿಂದಲೇ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
©2021 Tulunada Surya | Developed by CuriousLabs