Thursday, March 28, 2024
spot_img
More

    Latest Posts

    ಮೈಸೂರು: ಸಾಲ ತೀರಿಸಲು ತಂದ ಹಣ ಕದ್ದ ಕಿರಾತಕಿ!

    ಮೈಸೂರು: ಮಹಿಳೆಯೊಬ್ಬರು ಸಾಲ ತೀರಿಸಲು ಬೆಂಗಳೂರಿನಿಂದ ತಂದ ಹಣವನ್ನು ಚಾಲಾಕಿ ಕಳ್ಳಿ ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಾಗಮ್ಮ ಹಣ ಕಳೆದುಕೊಂಡ ನತದೃಷ್ಟೆ.

    ಸಾಲ ತೀರಿಸಲು ನಾಗಮ್ಮ ಬೆಂಗಳೂರಿನಿಂದ ಹಣ ತಂದಿದ್ದಾರೆ. ಅಲ್ಲದೆ ಮೈಸೂರಿನ ಸುಮಂಗಲಿ ಸಿಲ್ಕ್ಸ್ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹಣದ ಬ್ಯಾಗ್ ಸಮೇತ ಹೋಗಿದ್ದಾರೆ. ಬಟ್ಟೆ ಖರೀದಿಯಲ್ಲಿ ಮಗ್ನರಾದ ನಾಗಮ್ಮನ್ನು ಗಮನಿಸಿದ ಚಲಾಕಿ ಕಳ್ಳಿ, ಅವರಿಗೆ ಗೊತ್ತಾಗದಂತೆ ಬ್ಯಾಗ್‍ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾಳೆ.

    ಹಣ ಕದಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ನಾಗಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss