ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಅವರು ಇ-ಕೋರ್ಟ್ ಯೋಜನೆಯ ಅಡಿಯಲ್ಲಿ ವಿವಿಧ ಹೊಸ ಉಪಕ್ರಮಗಳಿಗೆ ಚಾಲನೆ ನೀಡಿದರು. ಇದರ ಅಡಿಯಲ್ಲಿ, ವರ್ಚುವಲ್ ಜಸ್ಟೀಸ್ ಕ್ಲಾಕ್, ಜಸ್ಟೀಸ್ ಮೊಬೈಲ್ ಅಪ್ಲಿಕೇಶನ್ 2.0, ಡಿಜಿಟಲ್ ಕೋರ್ಟ್ ಮತ್ತು ಎಸ್ 3ಡಬ್ಲ್ಯೂಎಎಎಸ್ ವೆಬ್ಸೈಟ್ ಅನ್ನು ಕೂಡ ಚಾಲನೆ ನೀಡಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಇಂದು 26/11 ರ ಮುಂಬೈ ಭಯೋತ್ಪಾದಕ ದಾಳಿಯ ದಿನವಾಗಿದೆ. 14 ವರ್ಷಗಳ ಹಿಂದೆ, ಭಾರತವು ತನ್ನ ಸಂವಿಧಾನದ ಹಬ್ಬವನ್ನು ಆಚರಿಸುತ್ತಿದ್ದಾಗ, ಅದೇ ದಿನ, ಮಾನವೀಯತೆಯ ಶತ್ರುಗಳು ಭಾರತದ ಮೇಲೆ ಅತಿದೊಡ್ಡ ಭಯೋತ್ಪಾದಕ ದಾಳಿ ನಡೆಸಿದರು. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಅಂ ತತಿಳಿಸಿದರು.
ಇದೇ ವೇಳೇ ಅವರು ಜಗತ್ತು ನಮ್ಮನ್ನು ಭರವಸೆಯಿಂದ ನೋಡುತ್ತಿದೆ. ಭಾರತದ ಬೆಳೆಯುತ್ತಿರುವ ಅಂತರರಾಷ್ಟ್ರೀಯ ವರ್ಚಸ್ಸಿನ ನಡುವೆ ಜಗತ್ತು ನಮ್ಮನ್ನು ಭರವಸೆಯಿಂದ ನೋಡುತ್ತಿದೆ. ಇಂದು, ಈ ದೇಶವು ಸಂಪೂರ್ಣ ಸಾಮರ್ಥ್ಯದೊಂದಿಗೆ ಮುಂದುವರಿಯುತ್ತಿದೆ. ಇದೆಲ್ಲದರ ಹಿಂದಿರುವ ನಮ್ಮ ದೊಡ್ಡ ಶಕ್ತಿಯೆಂದರೆ ನಮ್ಮ ಸಂವಿಧಾನ. ನಮ್ಮ ಸಂವಿಧಾನದ ಪ್ರಸ್ತಾವನೆಯ ಆರಂಭದಲ್ಲಿ ಬರೆದಿರುವುದು ಒಂದು ಪದವಲ್ಲ, ಒಂದು ಭಾವನೆಯಾಗಿದೆ ಅಂತ ತಿಳಿಸಿದರು.
ಇದೇ ವೇಳೆ ಅವರು ‘ಭಾರತದ ಸಂವಿಧಾನವು ದೇಶದ ಎಲ್ಲಾ ಸಾಂಸ್ಕೃತಿಕ ಮತ್ತು ನೈತಿಕ ಮನೋಭಾವವನ್ನು ಪ್ರತಿಷ್ಠಾಪಿಸಿದೆ. ಇಂದು ದೇಶವು ಪ್ರಜಾಪ್ರಭುತ್ವದ ತಾಯಿಯಾಗಿ ಸಂವಿಧಾನದ ಆದರ್ಶಗಳು ಮತ್ತು ಮನೋಭಾವವನ್ನು ಬಲಪಡಿಸುತ್ತಿದೆ ಎಂದು ನನಗೆ ತೃಪ್ತಿಯಾಗಿದೆ. ದೇಶದ ತಾಯಂದಿರು ಮತ್ತು ಸಹೋದರಿಯರನ್ನು ಸಶಕ್ತಗೊಳಿಸಲಾಗುತ್ತಿದೆ. ಜನಸಾಮಾನ್ಯರಿಗಾಗಿ ಇಂದು ಕಾನೂನುಗಳನ್ನು ಸರಳೀಕರಿಸಲಾಗುತ್ತಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಕಾಲಿಕ ನ್ಯಾಯಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಪ್ರಯತ್ನಗಳಿಗಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ. ನಮ್ಮ ಕರ್ತವ್ಯ ಮಾರ್ಗವನ್ನು ಅನುಸರಿಸುವ ಮೂಲಕವೇ ನಾವು ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಇಂದು, ಭಾರತದ ಮುಂದೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಅಂತ ತಿಳಿಸಿದರು.
ಒಂದು ವಾರದ ನಂತರ, ಭಾರತವು ಜಿ -20 ಅಧ್ಯಕ್ಷ ಸ್ಥಾನವನ್ನು ಪಡೆಯಲಿದೆ. ಇದೊಂದು ದೊಡ್ಡ ಅವಕಾಶ. ನಾವೆಲ್ಲರೂ ಟೀಮ್ ಇಂಡಿಯಾ ಎಂದು ವಿಶ್ವದಲ್ಲಿ ಭಾರತದ ಖ್ಯಾತಿಯನ್ನು ಹೆಚ್ಚಿಸೋಣ. ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಗುರುತಿಸಲಾಗಿದೆ, ಅದನ್ನು ಮತ್ತಷ್ಟು ಸಶಕ್ತಗೊಳಿಸಬೇಕಾಗಿದೆ ಅಂತ ಕರೆ ನೀಡಿದರು.