ಕುಟುಂಬದವರು ನೋಡಿದ ಹುಡುಗನನ್ನು ಮದುವೆ ಆಗಲು ಒಪ್ಪಲಿಲ್ಲ ಅಂತ 20 ವರ್ಷದ ಮಗಳನ್ನೇ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹಿಂದೂಳಿದ ಸಮುದಾಯಕ್ಕೆ ಸೇರಿದ ಪಿ.ಅರುಣಾ ಹತ್ಯೆಗೊಳಗಾದ ಯುವತಿ.
ಮಗಳನ್ನು ಕೊಂದು ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇದರೊಂದು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗಿದ್ದು, ಯುವತಿ ಮನೆಯಲ್ಲಿ ನೋಡಿದ ಹುಡುಗನನ್ನು ಮದುವೆ ಆಗಲು ನಿರಾಕರಿಸಿದ್ದು, ಮತ್ತೊಂದು ಕೋಮಿನ ಯುವಕನನ್ನು ಮದುವೆ ಆಗಲು ಪಟ್ಟು ಹಿಡಿದಿದ್ದಳು ಎಂದು ಹೇಳಲಾಗಿದೆ.
ಅರುಣಾ ಅವರ ತಂದೆ ಮತ್ತು ಅಣ್ಣ ಚೆನ್ನೈನಲ್ಲಿ ಆಟೋ ಚಲಾಯಿಸುತ್ತಿದ್ದರು. ತಿರುನವೆಳ್ಳಿಯಲ್ಲಿ ಅಮ್ಮನ ಜೊತೆಗಿದ್ದ ಮಗಳೇ ಕೊಲೆಗೀಡಾಗಿದ್ದಾಳೆ. ಕೊಯಮತ್ತೂರಿನಲ್ಲಿ ನರ್ಸ್ ಉದ್ಯೋಗಕ್ಕೆ ಸೇರಿದ್ದ ಮಗಳು 6 ತಿಂಗಳ ಹಿಂದೆಯಷ್ಟೇ ಮನೆಗೆ ಹಿಂತಿರುಗಿದ್ದಳು.
