Tuesday, May 30, 2023

ಐಕಳ ಹರೀಶ್ ಶೆಟ್ಟಿ ಯವರ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ಹರ್ಷ ವ್ಯಕ್ತ ಪಡಿಸಿದ ಪುಣೆಯ ಉದ್ಯಮಿ ಕೆ.ಕೆ. ಶೆಟ್ಟಿ

ಕುಂಬ್ಳೆ ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಶಬ್ರಿ ಇಂಡಸ್ಟ್ರಿಯಲ್ ಕೇಟರಿಂಗ್ ಅಹಮದ್ ನಗರ, ಮುಂಬೈ ಇದರ ಅಧ್ಯಕ್ಷರಾದ ಶ್ರೀ ಕೆ ಕೆ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ...
More

  Latest Posts

  ಕುಂದಾಪುರ: ತೆಂಗಿನ ಮರಕ್ಕೆ ಢಿಕ್ಕಿಯಾದ ಆಟೋ ರಿಕ್ಷಾ – ಪ್ರಯಾಣಿಕ ಮೃತ್ಯು

  ಕುಂದಾಪುರ: ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದ ಆನಗೋಡು...

  ಮಂಗಳೂರು: ಗಣೇಶ್ ಕುಲಾಲ್ ಮಾಣಿಲರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

  ಮಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಪಿ ಎಸ್ ದಿನೇಶ್ ಕುಮಾರ್ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೊಜ ಡಾಕ್ಟರ್ ಮಹೇಶ್ ಜೋಶಿ ಹಾಗೂ...

  ‘ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುತ್ತೇವೆ’ – ಡಿಕೆಶಿ

  ಬೆಂಗಳೂರು: ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 1ರಂದು...

  ಬೈಂದೂರು : ನಿರುದ್ಯೋಗದಿಂದ ಮನನೊಂದ ಯುವತಿ ಆತ್ಮಹತ್ಯೆ

  ಬೈಂದೂರು: ನಿರುದ್ಯೋಗದ ಕಾರಣದಿಂದ  ಮನನೊಂದ ಯುವತಿ ಡೆತ್‌ ನೋಟ್‌ ಬರೆದು  ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಲ್ತೊಡು ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ  ಗೌತಮಿ...

  ಪ್ರಧಾನಿ ಮೋದಿ ಸಫಾರಿ ವೇಳೆ ಹುಲಿ ಕಾಣದೇ ಇರಲು ಕಾರಣ ಕೊನೆಗೂ ಬಹಿರಂಗ…!?

  ಬಂಡೀಪುರ: ಪ್ರಧಾನಿ ಮೋದಿ ಬಂಡೀಪುರಕ್ಕೆ ಭೇಟಿ ನೀಡಿದ್ದ ವೇಳೆ 22 ಕಿ.ಮೀ ಸಫಾರಿಯಲ್ಲಿ ಒಂದೇ ಒಂದೂ ಹುಲಿ ಕಾಣದೇ ಇರುವುದು ಅಚ್ಚರಿ ಮೂಡಿಸಿತ್ತು.ಬೆಳಿಗ್ಗೆ 7:15 ರಿಂದ 9:30 ವರೆಗೆ ಸಫಾರಿಯಲ್ಲಿ ಒಂದೇ ಒಂದು ಹುಲಿ ಕಾಣದ್ದಕ್ಕೆ, ಸಫಾರಿ ವೇಳೆ ವಾಹನ ಚಾಲನೆ ಮಾಡಿದ್ದ 29 ವರ್ಷದ ಚಾಲಕ ಮಧುಸೂಧನ್ ಬಗ್ಗೆಯೂ ಅಲ್ಲಲ್ಲಿ ಟೀಕೆ ವ್ಯಕ್ತವಾಗುತ್ತಿದ್ದು, ಆತ ಹುಲಿ ಕಾಣ ಸಿಗುವ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳದ್ದಕ್ಕೆ ಕ್ರಮ ಕೈಗೊಳ್ಳುವಂತೆ ಕೆಲವು ಬಿಜೆಪಿ ನಾಯಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ. ಪ್ರಧಾನಿ ಸಂಚರಿಸಿದ್ದ ವಾಹನದ ನೋಂದಣಿಯನ್ನೇ ರದ್ದು ಮಾಡಬೇಕೆಂದೂ ಕೆಲವು ಟ್ವೀಟ್ ಗಳು ಬಂದಿವೆ. ಆದರೆ ಸಫಾರಿ ವೇಳೆ ಹುಲಿ ಕಾಣದ್ದಕ್ಕೆ ಇರುವ ನೈಜ ಕಾರಣವೆಂದರೆ ಅದು ಪ್ರಧಾನಿ ಭದ್ರತಾ ಸಿಬ್ಬಂದಿಗಳು! ಅಂದರೆ ಎಸ್ ಪಿಜಿ.

  ಅಚ್ಚರಿಯಾಯ್ತಾ? ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡುವುದಕ್ಕೂ ಮುನ್ನ 5 ದಿನಗಳ ಹಿಂದೆ ಪ್ರಧಾನಿ ಸಫಾರಿ ಮಾಡಬೇಕಿದ್ದ ಜಾಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಸ್ ಪಿಜಿ, ಸ್ಥಳೀಯ ಪೊಲೀಸರು, ನಕ್ಸಲ್ ನಿಗ್ರಹ ಪಡೆ ಹಾಗೂ ಇನ್ನಿತರ ಭದ್ರತಾ ಪಡೆಗಳು ಹಲವು ಬಾರಿ ಸಫಾರಿ ಕೈಗೊಂಡು ತಪಾಸಣೆ ಮಾಡಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ಬಗ್ಗೆ ಮಾಹಿತಿ ನೀಡಿರುವ ಬಿಟಿಆರ್ ನ ಹಿರಿಯ ಅಧಿಕಾರಿಯೊಬ್ಬರು, ಪ್ರಧಾನಿ ಭೇಟಿಗೆ 5 ದಿನಗಳ ಹಿಂದೆ ಭದ್ರತಾ ದೃಷ್ಟಿಯಿಂದ ತಪಾಸಣೆ, ಡ್ರಿಲ್ ಗಳನ್ನು ಅದೇ ಮಾರ್ಗದಲ್ಲಿ ಕೈಗೊಂಡಿದ್ದ ಅಧಿಕಾರಿಗಳಿಗೆ ಹುಲಿಗಳು ಕಂಡುಬಂದಿದ್ದವು. ಆಗ ಕಂಡುಬಂದಿದ್ದ ಹುಲಿಗಳ ಫೋಟೋಗಳನ್ನು ಭದ್ರತಾ ಸಿಬ್ಬಂದಿಗಳೂ ಕ್ಲಿಕ್ಕಿಸಿದ್ದರು.

  ಆದರೆ ಪ್ರಧಾನಿ ಮೋದಿ ಅವರಿಗೆ ಹುಲಿಗಳು ಆಗಷ್ಟೇ ನಡೆದುಹೋಗಿರುವ ಹೆಜ್ಜೆ ಗುರುತು ಕಂಡಿತೇ ಹೊರತು ಹುಲಿಗಳು ಕಾಣಲಿಲ್ಲ. ಆದರೆ ಪ್ರಧಾನಿ ಸಫಾರಿ ಕೈಗೊಳ್ಳುವ ವೇಳೆಗೆ ಅವು ಸುರಕ್ಷಿತವಾದ, ಹೆಚ್ಚು ಗದ್ದಲಗಳಿಲ್ಲದ ಪ್ರದೇಶಗಳಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪ್ರಧಾನಿ ಸಫಾರಿಗೆ ಗುರುತಿಸಲಾದ ಮಾರ್ಗದಲ್ಲಿ ಹುಲಿಗಳು ತಿಂದು, ನಿದ್ದೆ ಮಾಡಿ ಅಲ್ಲಿಯೇ ಇರುತ್ತವೆ. ಭದ್ರತಾ ದೃಷ್ಟಿಯಿಂದ ಪ್ರಧಾನಿ ಇದ್ದ ಸಫಾರಿ ವಾಹನ ಬೆಂಗಾವಲು ಪಡೆ ಮಧ್ಯದಲ್ಲಿರುವಂತೆ ಯೋಜಿಸಲಾಗಿತ್ತು.

  ಆದರೆ ಸಫಾರಿ ವೇಳೆ ಎಂದಿಗೂ ಮುಂದೆ ಇರುವ ವಾಹನದಿಂದ ಪ್ರಾಣಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಮನವಿ ಮಾಡಿದ್ದೆವು. ಆದ್ದರಿಂದ ಭದ್ರತಾ ಸಿಬ್ಬಂದಿಗಳು ಹೆಚ್ಚುವರಿ ಸಫಾರಿ ಸುತ್ತುಗಳನ್ನು ಕೈಗೊಂಡಿದ್ದರು. ಈ ರೀತಿ ಮುಂದೆ ಇರುವ ವಾಹನದಿಂದ ಸಫಾರಿ ಕೈಗೊಂಡಾಗ ಹುಲಿ, ಚಿರತೆಗಳು ಸ್ಪಷ್ಟವಾಗಿ ಗೋಚರಿಸಿ ಅವುಗಳ ಫೋಟೋಗಳನ್ನೂ ಭದ್ರತಾ ಅಧಿಕಾರಿಗಳು ಕ್ಲಿಕ್ಕಿಸಿದ್ದರು ಹಾಗೂ ಪ್ರಧಾನಿ ಮೋದಿ ಅವರು ಮುಂದಿನ ವಾಹನದಲ್ಲಿರಬೇಕು ಎಂಬ ಅಂಶವನ್ನೂ ಒಪ್ಪಿದ್ದರು. ಇನ್ನು ಪ್ರಧಾನಿ ಮೋದಿ ಬರುವುದಕ್ಕೂ ಹಿಂದಿನ ದಿನ ಅಂದರೆ ಶನಿವಾರ ರಾತ್ರಿ, ಪ್ರಧಾನಿ ಮೋದಿ ಸಫಾರಿ ನಡೆಸುವ ಪ್ರದೇಶಗಳಲ್ಲಿ ಪ್ರಾಣಿಗಳ ಚಟುವಟಿಕೆಗಳಿಗೆ ಅಡ್ಡಿಯಾಗದಿರಲೆಂದು ಗದ್ದಲ ಇರುವುದು ಬೇಡ ಎಂದು ಬಿಟಿಆರ್ ಸಿಬ್ಬಂದಿಗಳು ಮನವಿ ಮಾಡಿದ್ದರು.

  ಶನಿವಾರ ರಾತ್ರಿ ಡ್ರಿಲ್ ನಡೆಯಲಿಲ್ಲ. ಇದು ಕಾರಣ ಪ್ರಧಾನಿ ಮೋದಿ ಅವರಿಗೆ ಕನಿಷ್ಟ 40 ಆನೆಗಳ ಹಿಂಡನ್ನು ಹಾಗೂ 20-30 ಗೌರ್ಗಳು, ಸುಮಾರು 30 ಸಾಂಬಾರ್ ಜಿಂಕೆಗಳು ಮತ್ತು ಇತರ ವನ್ಯಜೀವಿಗಳನ್ನು ನೋಡಲು ಸಾಧ್ಯವಾಯಿತು. ಆದರೆ ಸಫಾರಿಯ ಪ್ರಮುಖ ಉದ್ದೇಶವಾಗಿದ್ದ ಹುಲಿಗಳನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ವಿವರಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಹುಲಿ ಕಾಣದ್ದಕ್ಕೆ ಬಿಟಿಆರ್ ಅಧಿಕಾರಿಗಳ ಬಳಿ ನಯವಾಗಿ ದೂರು ಹೇಳಿದ್ದಾರೆ.

  ಹೀಗೇಕೆ ಆಯಿತು ಎಂಬ ಕಾರಣ ನೀಡಿದಾಗ, ಪ್ರಧಾನಿ ಮೋದಿ ಭದ್ರತಾ ಸಿಬ್ಬಂದಿಗಳೆಡೆಗೆ ತಿರುಗಿ, ಅವರು ತಮ್ಮನ್ನು ಹುಲಿ ನೋಡುವುದರಿಂದ ವಂಚಿತರನ್ನಾಗಿಸಿದ್ದಾರೆ ಎಂದು ನೆನಪಿಸಿದ್ದನ್ನು ಬಿಟಿಆರ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಹಾಗೆಯೇ ಮೋದಿ ಸಫಾರಿಗೆ ತೆರಳಿದ್ದ ವಾಹನದ ನೋಂದಣಿಯನ್ನು ರದ್ದುಗೊಳಿಸುವ ಮಾಹಿತಿ ಸುಳ್ಳು, ವೈರಲ್ ಆಗುತ್ತಿರುವ ನಂಬರ್ ಪ್ಲೇಟ್ ನ ವಾಹನ ಹಳೆಯದ್ದಾಗಿದ್ದು ಅದು ಈಗ ಬಳಕೆಯಲ್ಲಿಯೇ ಇಲ್ಲ. ಹಾಗೆಯೇ ಚಾಲಕ ಮಧುಸೂಧನ್ ಅವರದ್ದೂ ತಪ್ಪಿಲ್ಲ. ಭದ್ರತೆಯ ಹೆಸರಿನಲ್ಲಿ ಸಫಾರಿ ಮಾರ್ಗದಲ್ಲಿ ಪದೇ ಪದೇ ವಾಹನಗಳು ಸಂಚರಿಸಿದ್ದರಿಂದ ಹುಲಿ ಕಂಡುಬಾರದೇ ಇರುವ ಸಾಧ್ಯತೆಗಳೂ ಇದೆ ಎಂದು ಹೇಳಿದ್ದಾರೆ.

  Latest Posts

  ಕುಂದಾಪುರ: ತೆಂಗಿನ ಮರಕ್ಕೆ ಢಿಕ್ಕಿಯಾದ ಆಟೋ ರಿಕ್ಷಾ – ಪ್ರಯಾಣಿಕ ಮೃತ್ಯು

  ಕುಂದಾಪುರ: ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದ ಆನಗೋಡು...

  ಮಂಗಳೂರು: ಗಣೇಶ್ ಕುಲಾಲ್ ಮಾಣಿಲರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

  ಮಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಪಿ ಎಸ್ ದಿನೇಶ್ ಕುಮಾರ್ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೊಜ ಡಾಕ್ಟರ್ ಮಹೇಶ್ ಜೋಶಿ ಹಾಗೂ...

  ‘ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುತ್ತೇವೆ’ – ಡಿಕೆಶಿ

  ಬೆಂಗಳೂರು: ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 1ರಂದು...

  ಬೈಂದೂರು : ನಿರುದ್ಯೋಗದಿಂದ ಮನನೊಂದ ಯುವತಿ ಆತ್ಮಹತ್ಯೆ

  ಬೈಂದೂರು: ನಿರುದ್ಯೋಗದ ಕಾರಣದಿಂದ  ಮನನೊಂದ ಯುವತಿ ಡೆತ್‌ ನೋಟ್‌ ಬರೆದು  ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಲ್ತೊಡು ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ  ಗೌತಮಿ...

  Don't Miss

  ಬೆಳ್ತಂಗಡಿ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ; ಗಂಭೀರ ಗಾಯಗೊಂಡಿದ್ದ KSRTC ಬಸ್ ಚಾಲಕ ಸಾವು

  ಬೆಳ್ತಂಗಡಿ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೇ.18ರಂದು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸೇತುವೆ ಸಮೀಪ...

  BREAKING NEWS: ವಿಧಾನಸಭೆ ನೂತನ ಸ್ಪೀಕರ್ ಆಗಿ ಯು.ಟಿ ಖಾದರ್ ಸರ್ವಾನುಮತದಿಂದ ಆಯ್ಕೆ

  ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ವಿಧಾನಸಭೆ ನೂತನ ಸಭಾಧ್ಯಕ್ಷರು ಯಾರು ಆಗಲಿದ್ದಾರೆ ಎನ್ನುವುದಕ್ಕೆ ತೆರೆ ಬಿದ್ದಿದೆ. ಸ್ಪೀಕರ್ ಆಗಿ ಶಾಸಕ ಯು.ಟಿ ಖಾದರ್ ಆಯ್ಕೆಯಾಗಿದ್ದಾರೆ. ಇಂದು...

  ಖ್ಯಾತ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನ

  ಮುಂಬೈ: ಕಿರುತೆರೆ ರಂಗದಲ್ಲಿ ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದು, ಇಂದು ಬೆಳಿಗ್ಗೆ ಕಿರುತೆರೆ ನಟಿಯೊಬ್ಬಳು ಕಾರು ಅಪಘಾತದಲ್ಲಿ ಸಾವನಪ್ಪಿದ್ದ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೋರ್ವ ಖ್ಯಾತ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ.

  ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ತುರ್ತು ಕೈಗೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

  ಉಡುಪಿ: ಮಳೆಯಿಂದ ಉಂಟಾಗುವ ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳಲ್ಲಿ ಮಾನವ ಹಾನಿ ಹಾಗೂ ಹೆಚ್ಚಿನ ಆಸ್ತಿ ಹಾನಿ ಉಂಟಾಗದAತೆ ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಕೂರ್ಮಾರಾವ್...

  ಮಂಗಳೂರು: ಜೂನ್ 1ರಿಂದ ಜುಲೈ 31ರವರೆಗೆ ಮೀನುಗಾರಿಕೆ ನಿಷೇಧ

  ಮಂಗಳೂರು: ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು ಅಥವಾ ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳ ಮೂಲಕ...