ಮಂಗಳೂರು: ಚುನಾವಣಾ ಕಾವು ಜೋರಾಗುತ್ತಿರಬೇಕಾದರೆ, ಪ್ರಧಾನಿ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮೂಲಗಳ ಪ್ರಕಾರ, ಮೋದಿ ಮೇ 4ರಂದು ಉಡುಪಿಗೆ ಭೇಟಿ ನೀಡಲಿದ್ದು ಪಕ್ಷದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ಬಿಜೆಪಿಯಯ ಭದ್ರಕೋಟೆ ಕರಾವಳಿಗೆ ಮೋದಿ ಕಳೆದ ಬಾರಿಯೂ ಚುನಾವಣೆ ಘೋಷಣೆಯಾದ ಬಳಿಕ ಬಂದು ಭರ್ಜರಿ ಪ್ರಚಾರ ನಡೆಸಿದ್ದರು. ಇವರಲ್ಲದೆ ಕಳೆದ ಬಾರಿಯಂತೆ ಯೋಗಿ ಆದಿತ್ಯನಾಥ್ ಕೂಡ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಹೀಗಾಗಿ, 2 ಜಿಲ್ಲೆಗಳ ಮತದಾರರನ್ನು ಕೇಂದ್ರೀಕರಿಸಿಕೊಂಡು ಮೋದಿ ಆಗಮಿಸಲಿದ್ದು, ಸಮಾವೇಶ ಸ್ಥಳದ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ
©2021 Tulunada Surya | Developed by CuriousLabs