Monday, November 29, 2021

ಮಂಗಳೂರು: ‘ಡಿ. 8ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಣೆ’

ಕೋವಿಡ್-19 ಕಣ್ಣಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಹಾಗೂ ಈ ಮಾರ್ಗಸೂಚಿಗಳಿಗೆ ಸಂಬಂಧಿಸಿ ಹೊರಡಿಸಿರುವ ಸರ್ಕಾರದ ವಿಸ್ತರಣೆ ಆದೇಶಗಳನ್ನು ಡಿಸೆಂಬರ್ 8ರ ಬೆಳಗ್ಗೆ 6 ಗಂಟೆವರೆಗೆ ಮುಂದುವರಿಸಿ ಆದೇಶ...
More

    Latest Posts

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

    ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

    ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

    ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

    ಕುಂದಾಪುರ: ಮೊಬೈಲ್ ಶಾಪ್ ಮಾಲೀಕನ ಕಿಡ್ನಾಪ್ ;4.5 ಲಕ್ಷಕ್ಕೂ ಅಧಿಕ ಸುಲಿಗೆ!

    ಕುಂದಾಪುರ: ಕುಂದಾಪುರದಲ್ಲಿ ಮೊಬೈಲ್ ಶಾಪ್ ನಡೆಸುತ್ತಿರುವ ಯುವಕನನ್ನು ಆರು‌ ಮಂದಿಯಿದ್ದ ತಂಡವೊಂದು ಅಪಹರಿಸಿ ಆತನಿಂದ ನಗದು ಹಾಗೂ ದಾಖಲೆಗಳನ್ನು ಸುಲಿಗೆ ಮಾಡಿದ ಘಟನೆ ನಡೆದಿದೆ.

    ಬೈಂದೂರು ತಾಲೂಕು ಅರೆಹೊಳೆ ಮೂಲದ ಪ್ರಸ್ತುತ ಕುಂದಾಪುರದ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ಮುಸ್ತಾಫ್ (34) ಅಪಹರಣಕ್ಕೊಳಗಾದವರು. ಮುಕ್ತಾರ್ ಹಾಗೂ ಇತರ ಐವರು ಅಪಹರಣ ಮಾಡಿ 4 ಲಕ್ಷದ 64 ಸಾವಿರದ ನೂರ ಎಪ್ಪತ್ತೈದು ರೂಪಾಯಿ ಹಣ ಹಾಗೂ 1 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ಅಮೂಲ್ಯ ದಾಖಲಾತಿಗಳನ್ನು ಸುಲಿಗೆ ಮಾಡಿದ ಬಗ್ಗೆ ಮುಸ್ತಾಫ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ವಿವರ
    ಕುಂದಾಪುರದ ಚಿಕನ್ ಸಾಲ್ ರಸ್ತೆಯಲ್ಲಿ ಮೊಬೈಲ್ ಏಕ್ಸ್ ಎಂಬ ಮೊಬೈಲ್ ಅಂಗಡಿಯನ್ನು ಹೊಂದಿರುವ ಮುಸ್ತಾಪ್ ಸೆ.17 ರಂದು ರಾತ್ರಿ 9.30ಕ್ಕೆ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಹಣ 50 ಸಾವಿರ ನಗದು, ಆಧಾರ್ ಕಾರ್ಡ್ , ಪಾನ್ ಕಾರ್ಡ್ 3-4 ಬ್ಯಾಂಕ್‌ಗಳ ಚೆಕ್ ಪುಸ್ತಕಗಳು ಹಾಗೂ ಇನ್ನಿತರ ಅಮೂಲ್ಯ ದಾಖಲಾತಿಯೊಂದಿಗೆ ಹಾಗೂ ಐಫೋನ್ -1, ಸ್ಯಾಮಸಂಗ್ ಮೊಬೈಲ್ ಫೋನ್ 1, ಆಪಲ್ ಸ್ಮಾರ್ಟ್ ವಾಚ್ -1 ಹಾಗೂ ಏರ್ ಪೋಡ್-1 ಇವುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ತನ್ನ ವಾಸದ ಪ್ಲ್ಯಾಟ್ ಸಮೀಪ ಹೋದಾಗ ಒಂದು ಸ್ವಿಪ್ಟ್ ಕಾರು ಅನುಮಾನಾಸ್ಪದವಾಗಿ ಬಂದಿದ್ದು ಅದರ ಚಾಲಕನಾಗಿ ಆರೋಪಿ ಮುಕ್ತಾರ್ ಎಂಬುವವರಿದ್ದು ಅಪರಿಚಿತ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ದೈಹಿಕ ಹಲ್ಲೆ ಮಾಡಿ ಕಾರಿನ ಒಳಗೆ ಎಳೆದುಕೊಂಡಿದ್ದು ಕಾರಿನಲ್ಲಿದ್ದ ಇನ್ನೊರ್ವ ಅಪರಿಚಿತ ವ್ಯಕ್ತಿ ಕೈಯಲ್ಲಿದ್ದ ರಿಲಾಲ್ವರ್‌ ಅನ್ನು ತೋರಿಸಿ ಬೆದರಿಸಿದ್ದಾನೆ. ಓರ್ವ ಆರೋಪಿಯು ಮುಸ್ತಾಫ್ ಎಡಕಣ್ಣಿನ ಕೆಳಗೆ ಮುಷ್ಠಿಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿ ಕೈಯನ್ನು ಹಾಗೂ ಬಾಯಿಯನ್ನು ಕಟ್ಟಿ ಕೂಗದಂತೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ತೆರಳುವ ಮಾರ್ಗಮದ್ಯೆ ಓರ್ವ ಮಹಿಳೆ ಕಾರು ಏರಿದ್ದು ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮತ್ತಿಬ್ಬರು ಅಪರಿಚಿತ ಆರೋಪಿಗಳು ಇವರಿಗೆ ಜೊತೆಯಾಗಿದ್ದಾರೆ.

    4.5 ಲಕ್ಷಕ್ಕೂ ಅಧಿಕ ಸುಲಿಗೆ
    ಲಾಡ್ಜಿನಲ್ಲಿ ಮಹಿಳಾ ಆರೋಪಿ ಒಂದು ಮೊಬೈಲ್‌ಗೆ ಮುಸ್ತಾಪ್ ಅವರ ಸಿಮ್ ಕಾರ್ಡ್ ಹಾಕಿ ಮನೆಯವರಿಗೆ ಕರೆ ಮಾಡಿಸಿ‌ ಅವರಿಂದ ತಲಾ ಒಂದೊಂದು‌ ಲಕ್ಷ ಬೇಕೆಂದು ಹಾಕಿಸಿಕೊಂಡಿದ್ದು ಮುಸ್ತಾಪ್ ಖಾತೆಯಲ್ಲಿದ್ದ ಹಣ ಸಹಿತ ಮೊಬೈಲ್‌ ಮೂಲಕ ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ಅವರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು ಮಾತ್ರವಲ್ಲದೇ ಕುಂದಾಫುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆಯಲ್ಲಿ ಬೆಂಗಳೂರಿನ ಎಟಿಎಮ್‌ ಹಾಗೂ ಸ್ವೈಪಿಂಗ್ ಮೆಷಿನ್‌ ನಿಂದ ರೂಪಾಯಿ 3,14,175 /- ರೂಪಾಯಿಯನ್ನು ಡ್ರಾ ಮಾಡಿದ್ದಾರೆ. ಅಲ್ಲದೆ ಎಕ್ಸಿಸ್ ಬ್ಯಾಂಕ್‌ನ ಚೆಕ್ ಪುಸ್ತಕವನ್ನು ತೆಗೆದುಕೊಂಡು ಸಹಿ ಮಾಡಲು ಹೇಳಿ ನೀನು ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು ಜಮಾ ಮಾಡಿದರೇ ಮಾತ್ರ ದಾಖಲಾತಿಯನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳ ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಒಟ್ಟು 4,64,175 ರೂ. ಹಣವನ್ನು ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.ಮತ್ತೆ ಹಣಕ್ಕೆ ಬೇಡಿಕೆಯಿಟ್ಟು ಮೊಬೈಲ್, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ.18ರಂದು ರಾತ್ರಿ 9:30ಕ್ಕೆ ಮುಸ್ತಾಫ್ ಅವರನ್ನು ಬಿಟ್ಟಿದ್ದು ಸ್ನೇಹಿತರ ಸಹಾಯದಿಂದ ಅವರು ಸೆ.19ಕ್ಕೆ ಊರು ಸೇರಿದ್ದಾರೆ.ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

    Latest Posts

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

    ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

    ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

    ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

    Don't Miss

    ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ: 52 ಮಂದಿ ದಾರುಣ ಸಾವು

    ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ...

    SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

    ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

    BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

    ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...

    ಮಂಗಳೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗಳು 4 ದಿನ ಪೊಲೀಸ್ ಕಸ್ಟಡಿಗೆ

    ಮಂಗಳೂರು: ವಾಮಂಜೂರು ಉಳಾಯಿಬೆಟ್ಟು ಪರಾರಿಯ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ...

    ಮಂಗಳೂರು: ಇಂದಿನಿಂದ ‘ಬೃಹತ್ ಕೋವಿಡ್ ವಾಕ್ಸಿನ್ ಮೇಳ’ ಆರಂಭ

    ಮಂಗಳೂರು: ನಗರದಲ್ಲಿ ಕೊವೀಡ್ ರೋಗ ನಿರೋಧಕ ಲಸಿಕೆ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯಲ್ಲಿ ಬೃಹತ್ ಕೋವಿಡ್ ಲಸಿಕಾ ಶಿಬಿರ ಆರಂಭವಾಗಲಿದೆ.