ಮಂಗಳೂರು: ದ.ಕ.ಜಿಲ್ಲಾಧಿಕಾರಿಯವರ ಮೊಬೈಲ್ ಸಂಖ್ಯೆ ಹ್ಯಾಕ್ ಆಗಿದ್ದು, ಡಿಸಿಯವರ ಹೆಸರು, ಫೋಟೋ ಬಳಸಿ ಹಣ ವರ್ಗಾಯಿಸುವಂತೆ ಸಂದೇಶ ರವಾನಿಸಲಾಗಿದೆ. ಆದ್ದರಿಂದ ಹ್ಯಾಕರ್‌ಗಳ ಮೋಸದ ಜಾಲಕ್ಕೆ ಬಲಿಯಾಗದಿರಿ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಹೆಸರು ಹಾಗೂ ಫೋಟೋ ಬಳಸಿ ಹಣ ವರ್ಗಾಯಿಸುವಂತೆ ವಾಟ್ಸ್ಆ್ಯಪ್ ಮೆಸೇಜ್ ಮಾಡಲಾಗುತ್ತಿದೆ. 8590710748 ಮೊಬೈಲ್ ಸಂಖ್ಯೆಯ ಮೂಲಕ ಜಿಲ್ಲಾಧಿಕಾರಿಯವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದ ಹಲವರಿಗೆ ಮೆಸೇಜ್ ಮಾಡುತ್ತಿದ್ದಾರೆ. ಮೇಲ್ ಹ್ಯಾಕ್ ಮಾಡಿ ಕಾಂಟ್ಯಾಕ್ಟ್ ನಂಬರ್ ಪಡೆದಿರುವ ಸಾಧ್ಯತೆಯಿದೆ.
ಆದ್ದರಿಂದ ಯಾರೂ ಹಣ ವರ್ಗಾಯಿಸದಂತೆ ಜನರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. 8590710748 ಮೊಬೈಲ್ ಸಂಖ್ಯೆಯಿಂದ ಯಾವುದಾದರೂ ಸಂದೇಶ ಬಂದಲ್ಲಿ ಆ ನಂಬರ್ ಅನ್ನು ಬ್ಲಾಕ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ದೂರು ನೀಡಿದ್ದಾರೆ.
