ಮೈಸೂರು: ಅಚ್ಚರಿ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮೇಲೆ ಎಫ್ಐಆರ್ ದಾಖಲಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕ ಸಾ.ರಾ.ಮಹೇಶ್ ಅವರೇ ಠಾಣೆಗೆ ಆಗಮಿಸಿ ಬಂಧಿಸುವಂತೆ ಪ್ರತಿಭಟಿಸಿದ ಘಟನೆ ನಡೆದಿದೆ. ದೂರುದಾರರ ದೂರಿನ ಮೇರೆಗೆ ಶಾಸಕ ಸಾ.ರಾ.ಮಹೇಶ್ ವಿರುದ್ಧ ಪ್ರಕರಣ ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಶಾಸಕ ಸಾ.ರಾ. ಮಹೇಶ್ ಸ್ವತಃ ಠಾಣೆಗೆ ಆಗಮಿಸಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಜತೆಗೂಡಿ ತಮ್ಮನ್ನೂ ಬಂಧಿಸುವಂತೆ ಹೇಳಿದ್ದಾರೆ. ಸಾ.ರಾ.ಮಹೇಶ್ ಬೆಂಬಲಿಗರು ಕೂಡ ಪೊಲೀಸರ ನಡೆಯನ್ನು ಖಂಡಿಸಿ ರಾತ್ರೋರಾತ್ರಿ ಧರಣಿ ನಡೆಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ಆಗಮಿಸಿದ್ದು, ಯಾವ ಉದ್ದೇಶಕ್ಕೆ ಎಫ್ ಐಆರ್ ದಾಖಲಾಗಿದೆ. ಯಾವ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬರಬೇಕಿದೆ ಎಂದರು.
ರಾತ್ರೋರಾತ್ರಿ ಶಾಸಕರ ಏಕಾಎಕಿ ಧರಣಿಗೆ ಪೊಲೀಸರು ತಬ್ಬಿಬ್ಬಾಗಿದ್ದಾರೆ. ದೂರುದಾರನ ಹಿನ್ನಲೆ, ಆದಾಯ ಮೂಲ ತನಿಖೆಯಾಗಲಿ. ಎರಡು ತಿಂಗಳಿಂದ ನಡೆದಿರುವ ಪೋನ್ ಸಂಭಾಷಣೆ ಕುರಿತು ಕಾಲ್ ಡಿಟೇಲ್ಸ್ ತೆಗೆಸಿದರೆ ಬಂಡವಾಳ ಬಯಲಾಗುತ್ತದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಎಂದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಡಾ| ಚಂದ್ರಗುಪ್ತ ಅವರು ಶಾಸಕ ಸಾ.ರಾ. ಮಹೇಶ್ ಮನವೂಲಿಸಿದ ಹಿನ್ನಲೆಯಲ್ಲಿ ಧರಣಿ ಕೈಬಿಡಲಾಯಿತು.

