ಉಡುಪಿ:ಬ್ಯಾಗ್ ಹಿಡಿ ಜನಸಾಮಾನ್ಯರಂತೆ ಬೆಂಗಳೂರಿಗೆ ಹೊರಟ ಶಾಸಕರ ವಿಡಿಯೋ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಾಮಾನ್ಯ ಜನರಂತೆ ಬರಿಗಾಲಿನಲ್ಲಿ ಬ್ಯಾಗ್ ಹಿಡಿದು ರೈಲಿನಲ್ಲಿಯೇ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಗುರುರಾಜ್ ಶೆಟ್ಟಿ ಬಿಳಿ ಶರ್ಟ್, ಬಿಳಿ ಪಂಚೆ ಧರಿಸಿ, ಒಂದು ಬ್ಯಾಗ್ ಹಾಕಿಕೊಂಡು ಸಿಂಪಲ್ ಆಗಿ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ಇವರು ಕಳೆದ 20 ವರ್ಷಗಳಿಂದ ಬರಿಗಾಲಿನಲ್ಲಿಯೇ ತಿರುಗಾಡುತ್ತಾರೆ.ಅದನ್ನೇ ಮುಂದುವರಿಸಿದ್ದಾರೆ ಎನ್ನಲಾಗಿದೆ. ನೀವು ಬರಿಗಾಲಿನಲ್ಲಿಯೇ ನಡೆಯೋದು ಏಕೆ ಎಂದು ಕೇಳಿದರೆ, ಜನರ ತೊಂದರೆಗಳ ಬಗ್ಗೆ ನನಗೆ ಜಾಗೃತಿ ಮೂಡಿಸಿಕೊಳ್ಳಲು ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಂಡಿದ್ದೇನೆ. ಈ ಅಭ್ಯಾಸ ನನ್ನ ಕರ್ತವ್ಯಗಳನ್ನು ಪದೇ ಪದೇ ನೆನಪು ಮಾಡುತ್ತದೆ ಎಂದು ಶಾಸಕರು ಹೇಳಿದ್ದಾರೆ.