ಮಂಗಳೂರು: ಉಳ್ಳಾಲ ತಾಲೂಕಿನ ವಾಸುಕಿ ನಗರದ ನಿವಾಸಿ ಶ್ಯಾಮ್ (42) ಎಂಬವರು ನ.9ರಿಂದ ಕಾಣೆಯಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.6ಇಂಚು ಎತ್ತರ, ಎಣ್ಣೆಕಪ್ಪುಮೈಬಣ್ಣ, ಸಾಧಾರಣ ಶರೀರ, ಕೋಲುಮುಖ ಹೊಂದಿರುತ್ತಾರೆ.
ತೆಲುಗು, ತುಳು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ದಿನ ಕಡು ನೀಲಿ ಬಣ್ಣದ ಪ್ಯಾಂಟ್, ನಸು ಗುಲಾಬಿ ಬಣ್ಣದ ಕುರ್ತಾ ಹಾಗೂ ಕನ್ನಡಕ ಧರಿಸಿದ್ದರು. ಬಲಕೈಯಲ್ಲಿ ಹಳೆಯ ಶಸ್ತ್ರಚಿಕಿತ್ಸೆಯ ಗಾಯದ ಗುರುತು ಇದೆ. ಈ ಚಹರೆಯುಳ್ಳ ವ್ಯಕ್ತಿ ಕಂಡು ಬಂದರೆ ದೂ.ಸಂ:0824-2220800/0824-2466269ನ್ನು ಸಂಪರ್ಕಿಸುವಂತೆ ಉಳ್ಳಾಲ ಠಾಣಾಧಿಕಾರಿಯ ಪ್ರಕಟನೆ ತಿಳಿಸಿದೆ.