Monday, July 22, 2024
spot_img
More

  Latest Posts

  ಸುಳ್ಯ: ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

  ಸುಳ್ಯ: ಅಮರ ಮುಡ್ನೂರು ಗ್ರಾಮದ ಪೈಲೂರಿನ ರಂಜಿತ್ (24) ಎಂಬ ಯುವಕ ಕಳೆದ ಡಿ.25 ರಂದು ನಾಪತ್ತೆಯಾಗಿದ್ದು ಡಿ.30 ರಂದು ಬೆಳಗ್ಗೆ ಆತನ ಮೃತ ದೇಹ ಪೈಲಾರಿನ ರಬ್ಬರ್ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

  ಕುಕ್ಕುಜಡ್ಕದಲ್ಲಿ ಶಾಮಿಯಾನ ಕೆಲಸ ಮಾಡಿಕೊಂಡಿದ್ದ ಯುವಕ ರಂಜಿತ್ ಡಿ.25 ರಂದು ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಟು ಬಂದವನು ರಾತ್ರಿಯಾದರೂ ಮನೆಗೆ ಬರಲಿಲ್ಲ.ಇದರಿಂದ ಮನೆ ಯವರು ವಿಚಲಿತರಾಗಿ ಶಾಮಿಯಾನದ ಮಾಲಕರಿಗೆ ವಿಷಯ ತಿಳಿಸಿದರು. ಕೆಲಸಕ್ಕೆಂದು ಹೊರಟು ಬಂದಿರುವ ರಂಜಿತ್ ಆ ದಿವಸ ಕೆಲಸಕ್ಕೆ ಬಾರದೆ ನಾಪತ್ತೆ ಯಾಗಿರುತ್ತಾನೆ.ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರ ಹಾಗೂ ಗೆಳೆಯರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ರಂಜಿತ್ ನ ತಂದೆ ಬಾಬು ರವರು ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಹಲವಾರು ಕಡೆಗಳಲ್ಲಿ ಹುಡುಕಾಟದ ಪ್ರಯತ್ನ ಮಾಡಲಾಯಿತಾದರೂ ಪತ್ತೆಯಾಗಿರಲಿಲ್ಲ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss