Thursday, March 28, 2024
spot_img
More

    Latest Posts

    ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು; 80 ಲಕ್ಷ ರೂ. ದರೋಡೆ

    ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ಕಾರಿನಲ್ಲಿ ತೆರಳುತ್ತಿದ್ದವರಿಂದ 80 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇವಲ 15 ನಿಮಿಷದಲ್ಲಿ 80 ಲಕ್ಷ ರೂ. ಹಣವನ್ನು ಎಗರಿಸಿದ್ದಾರೆ.

    ಕುಮಾರಸ್ವಾಮಿ ಹಾಗೂ ಕಾರು ಚಾಲಕ ಚಂದನ್‌ ಹಣ ಕಳೆದುಕೊಂಡವರು.

    ಇವರು ಮಾಲೀಕನ ಆದೇಶದ ಮೇರೆಗೆ ಕಾರಿನಲ್ಲಿ 80 ಲಕ್ಷ ರೂ. ಹಣವನ್ನು ಸೇಲಂಗೆ ತೆಗೆದುಕೊಂಡು ಹೋಗುತ್ತಿದ್ದರು. ಎರಡು ಬ್ಯಾಗ್‌ನಲ್ಲಿ ತುಂಬಿದ್ದ ಹಣವನ್ನು ಹಿಂಬದಿಯ ಸೀಟ್‌ನಲ್ಲಿಟ್ಟು, ತುಮಕೂರಿನಿಂದ ಸೇಲಂಗೆ ಪ್ರಯಾಣ ಬೆಳೆಸಿದ್ದರು.

    ಇವರು ಕೆ.ಹೆಚ್ ರಸ್ತೆ ಸಿಗ್ನಲ್ ಬಳಿ‌ ನಿಂತಿರುವಾಗ‌ ಮಧ್ಯಾಹ್ನದ ಹೊತ್ತಿನಲ್ಲಿ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ವಿಲ್ಸನ್ ಗಾರ್ಡನ್‌ನ ರಿವೋಲಿ ಜಂಕ್ಷನ್ ಬಳಿ ಕಾರು ಪಕ್ಕ ಕಾರು ನಿಲ್ಲಿಸಿದ್ದಾರೆ. ಪೊಲೀಸ್ ಎಂದು ಸ್ಟಿಕರ್ ಅಂಟಿಸಿ ನಾಟಕವಾಡಿದ್ದಾರೆ. ತೆಲುಗು ಭಾಷೆಯಲ್ಲಿ ಮಾತನಾಡಿಕೊಂಡು ಬಂದು ದುಷ್ಕರ್ಮಿಗಳು ಪೊಲೀಸ್ ಅಂತಾ ಹೇಳಿ ಕಾರು ಹತ್ತಿಕೊಂಡಿದ್ದಾರೆ. ಒಬ್ಬ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರೂ ಕಾನ್‌ಸ್ಟೇಬಲ್‌ಗಳ ರೂಪದಲ್ಲಿ ಆರೋಪಿಗಳು ಬಂದಿದ್ದರು. ಬಳಿಕ ಲಾಠಿ ತೋರಿಸಿ ಬೆದರಿಸಿ ಹಣ ಕದ್ದೊಯ್ದಿದ್ದಾರೆ.

    ಅಡಿಕೆ ವ್ಯಾಪಾರದ ದುಡ್ಡನ್ನು ತೆಗೆದುಕೊಂಡು ಹೋಗುತ್ತಿದ್ದ ಚಾಲಕ ಚಂದನ್ ಹಾಗೂ ಕುಮಾರಸ್ವಾಮಿಗೆ ಆರಂಭದಲ್ಲಿ, ಇವರು ನಿಜವಾಗಿಯೂ ಪೊಲೀಸರೇ ಎಂಬ ಅನುಮಾನ ವ್ಯಕ್ತವಾಗಿದೆ. ಬಂದಿದ್ದವರು ನಕಲಿ ಪೊಲೀಸರು ಎಂದು ದೃಢಪಡಿಸಿಕೊಳ್ಳುವಷ್ಟರಲ್ಲಿ ಆರೋಪಿಗಳು ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss