ಮಂಗಳೂರು : ಮೇಘಲಯ ಮೆಲೋಡಿಸ್ ಇದರ 100 ನೇ ಸಂಚಿಕೆಯ ಮಹಾ ಸಂಭ್ರಮ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಮೆಗಾ ಕಲಾ ಸಂಗಮ ಕಾರ್ಯಕ್ರಮವು ಇಂದು (ಮೇ.01) ಬೆಳಿಗ್ಗೆ ಶ್ರೀ ಗುರು ವೈದ್ಯನಾಥ ಸಭಾ ಭವನ, ಕಾವೂರು ಮಂಗಳೂರು ಇಲ್ಲಿ ನಡೆಯಿತು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾದ ದಯಾನಂದ ಕತ್ತಲ್‌ಸರ್ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಕರಕರಿ ಫ್ರೆಂಡ್ಸ್ ಹೆಲ್ಪ್ ಗ್ರೂಪ್ ಇದರ ಮುಖ್ಯಸ್ಥರಾದ ನವೀನ್ ಬೈಲೂರು, ಡ್ರಾಮ ಜೂನಿಯರ್ ಸೀಸನ್ -4 ರ ವಿನ್ನರ್ ಕುಮಾರಿ ಸಮೃದ್ಧಿ ಎಸ್ ಮೊಗವೀರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾದ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಕುಮಾರ್ ಜೈನ್, ಸಂದೇಶ್ ನೀರ್ ಮಾರ್ಗ , ಪ್ರವೀಣ್ ಕೆ.ವಿ . ಐ, ಪ್ರಸನ್ನ ಆಚಾರ್ಯ , ಆದಿತ್ಯ ಕರ್ಕೇರ ,ಶ್ರೀಮತಿ ನಿಶ್ಚಿತ ಚರಣ್ , ಉದಯ್ ಕುಮಾರ್, ಲತೇಶ್ ಪುತ್ರನ್ ,ಶಶಿಧರ ಶೆಟ್ಟಿ ಉಜಿರೆ ಉಪಸ್ಥಿತರಿದ್ದರು.

