Sunday, September 15, 2024
spot_img
More

    Latest Posts

    ಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ವಿಧಿವಶ

    ತೀವ್ರ ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ವಿದ್ಯಾ ಸಾಗರ್​ ಅವರು ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ವಿದ್ಯಾಸಾಗರ್​ ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದರು. ಪಾರಿವಾಳದ ಹಿಕ್ಕೆಗಳಲ್ಲಿರುವ ಸೋಂಕಿತ ಗಾಳಿಯನ್ನು ಉಸಿರಾಡುವ ಮೂಲಕ ಉಂಟಾಗುವ ಅಲರ್ಜಿಯಾಗಿದೆ. ಈ ವರ್ಷದ ಜನವರಿಯಲ್ಲಿ ಮೀನಾ ಅವರ ಇಡೀ ಕುಟುಂಬ ಕೋವಿಡ್​ 19 ಸೋಂಕಿಗೆ ಒಳಗಾದಾಗ ವಿದ್ಯಾಸಾಗರ್​ ಅವರಿಗೆ ಶ್ವಾಸಕೋಸದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ.

    ವಿದ್ಯಾಸಾಗರ್ ಅವರು ಕರೊನಾ ಸ್ಥಿತಿಯಿಂದ ಚೇತರಿಸಿಕೊಂಡಿದ್ದರೂ, ನಂತರ ಶ್ವಾಸಕೋಸದ ಸಮಸ್ಯೆ ಇನ್ನಷ್ಟು ಹದಗೆಟ್ಟಿತು ಎಂದು ಹೇಳಲಾಗುತ್ತದೆ. ಕೆಲವು ವಾರಗಳ ಹಿಂದೆ ವೈದ್ಯರು, ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಕಸಿ ಮಾಡಲು ನಿರ್ಧರಿಸಿದ್ದರು. ಆದರೆ, ದಾನಿಯನ್ನು ಪಡೆಯುವಲ್ಲಿ ತೊಂದರೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಮಿದುಳು ಸತ್ತ ರೋಗಿಗಳಿಂದ ಮಾತ್ರ ಶ್ವಾಸಕೋಸ ಕಸಿ ಬೇಕಾದನ್ನು ಪಡೆಯಲು ಸಾಧ್ಯ. ಆದರೆ, ಅದಕ್ಕೆ ಕಾಯುತ್ತಿರುವವರ ಪಟ್ಟಿಯೂ ಕೂಡ ದೊಡ್ಡದಾಗಿದೆ.

    ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಮೀನಾ ಬೆಂಗಳೂರು ಮೂಲದ ವಿದ್ಯಾ ಸಾಗರ್ ವಿವಾಹವಾಗಿದ್ದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ವಿದ್ಯಾ ಸಾಗರ್ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿವಾಹದ ಬಳಿಕ ವಿದ್ಯಾ ಸಾಗರ್ ಮತ್ತು ಮೀನಾ ಚೆನ್ನೈನಲ್ಲಿ ವಾಸ್ತವ್ಯ ಹೂಡಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss