ಉಳ್ಳಾಲ:ರಾಷ್ಟ್ರೀಯ ಹೆದ್ದಾರಿಯ ತೊಕ್ಕೊಟ್ಟು ಜಂಕ್ಷನ್ ಬಳಿ ಇರುವ ಗ್ರಾಂಡ್ ಸಿಟಿಯ ಪ್ರಥಮ ಅಂತಸ್ತಿನಲ್ಲಿ ಹೋಮಿಯೋಪತಿ ಔಷದಿಗಳ ಹೋಮಿಯೋ ಎಂಪೋರಿಯಮ್ ಕ್ಲಿನಿಕ್ ಮತ್ತು ಔಷದಿ ಮಳಿಗೆ ಇಂದು ಶುಭಾರಂಭಗೊಂಡಿದೆ.

ಬೆಂಗಳೂರಿನ ಜನನಿ ಟೂರ್ಸ್ ಮತ್ತು ರೆಸಾರ್ಟ್ ಪ್ರೈ ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀ ಜಗದೀಶ್ ಕೋಟ್ಯಾನ್ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.
ಶ್ರೀಮತಿ ವಿನಯ ಶ್ರೀ ಪ್ರಭಾಕರ ನಾಯಕ್, ಶ್ರೀಮತಿ ಜಯಂತಿ ಶ್ರೀ ಲಕ್ಷ್ಮಣ್ ಕಿರೋಡಿಯನ್, ಶ್ರೀಮತಿ ಮಮತಾ ಸತೀಶ್ ಕುಂಪಲ ದಂಪತಿಗಳು ದೀಪ ಬೆಳಗಿಸಿದರು.

ಚಂದ್ರಹಾಸ್ ಅಡ್ಯಂತ್ತಾಯ, ಸೀತರಾಮ ಶೆಟ್ಟಿ ದಡಸ್, ಸುರೇಶ್ ಭಟ್ನಗರ, ಮೋಹನ್ ಶೆಟ್ಟಿ ಕುಂಪಲ, ವಿಶ್ವನಾಥ್ ಕೊಲ್ಯ, ಜಗದೀಶ್ ಆಚಾರ್ಯ, ಪ್ರವೀಣ್ ಎಸ್ ಕುಂಪಲ, ಹೇಮಂತ್ ಶೆಟ್ಟಿ, ದಯಾನಂದ ತೊಕ್ಕೊಟ್ಟು, ಅನಿಲ್ ಬಗಂಬಿಲ, ಸಂಪತ್ ಕುಕ್ಯಾನ್, ಪುರುಷೋತ್ತಮ ಕಲ್ಲಾಪು, ಚಂದ್ರಶೇಖರ್ ಬಿಜೆ, ಆನಂದ.ಎನ್ ಕುಂಪಲ, ಪ್ರದೀಪ್ ಶೆಟ್ಟಿ ಬೆರಿಕೆ, ಸಿರಾಜುದ್ದೀನ್ ಮುಡಿಪು, ಸಾಗರ್ ಕುಂಪಲ ಹಾಗೂ ಪವಿತ್ರ ಕೆರೆಬೈಲ್ ಆಗಮಿಸಿದ್ದರು.
ಹೋಮಿಯೋಪತಿ ಚಿಕಿತ್ಸೆ, ಮನುಷ್ಯನ ಜೀವನ ಶೈಲಿಗೆ ಬೇಕಾದ ಹೋಮಿಯೋಪತಿ ಔಷದಿಗಳು, ಪ್ರೋಟೀನ್ ಸಾಮಗ್ರಿಗಳು, ಸೌಂದರ್ಯ ವರ್ದಕ ವಸ್ತುಗಳು ಹಾಗು ಹೊಮಿಯೋಪತಿಗೆ ಸಂಬಂದಿಸಿದ ಎಲ್ಲಾ ಸೇವೆಗಳು ಲಭ್ಯವಿದೆ ಎಂದು ಪ್ರಹ್ಲಾದ್ ಕುಮಾರ್ ಇಂದಾಜೆ ತಿಳಿಸಿದರು.

